Saturday, May 11, 2024

ವಿಶೇಷ ಚೇತನ ಅಭಿಮಾನಿ ಜೊತೆ ಭೀಮನ ಖಾಸ್​ಬಾತ್!

ಫಿಲ್ಮಿ ಡೆಸ್ಕ್: ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಸದ್ಯ ಭೀಮನ ಅವತಾರ ತಾಳಿದ್ದು, ಕೌನ್ರೆ ಉನೇ ಅಂತಿದ್ದಾರೆ. ಮ್ಯೂಸಿಕ್ ಲವರ್ಸ್​ನ ಸೈಕ್ ಮಾಡಿರೋ ಭೀಮ ಆಲ್ಬಂ, ಎಲ್ಲೆಲ್ಲೂ ಗುನುಗುವಂತಿದೆ. ಸದ್ಯ ಭೀಮನ ಪ್ರಮೋಷನ್ಸ್​ ಜೊತೆ ಸ್ಪೆಷಲ್ ಅಭಿಮಾನಿಯನ್ನ ಮೀಟ್ ಮಾಡಿದ್ದಾರೆ ವಿಜಯ್ ಕುಮಾರ್. ಅದ್ಯಾರು ಅನ್ನೋದ್ರ ಜೊತೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್​ವುಡ್ ಅಪ್ಡೇಟ್ಸ್ ನಿಮಗಾಗಿ ಕಾಯ್ತಿದೆ.

ಸಲಗ ನಂತ್ರ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರೋ ಮತ್ತೊಂದು ಌಕ್ಷನ್ ಪ್ಯಾಕ್ಡ್ ಕಮರ್ಷಿಯಲ್ ಎಂಟರ್​ಟೈನರ್ ಭೀಮ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ ಭೀಮ ಸಿನಿಮಾ ಹತ್ತು ಹಲವು ವಿಶೇಷತೆಗಳಿಂದ ಮೇಕಿಂಗ್ ಹಂತದಲ್ಲೇ ಸಖತ್ ಸೌಂಡ್ ಮಾಡಿತ್ತು. ಇದೀಗ ಪೋಸ್ಟ್ ಪ್ರೊಡಕ್ಷನ್ ಮುಗಿಸಿ, ರಿಲೀಸ್ ಅಂಚಿಗೆ ಬಂದು ನಿಂತಿದೆ. ಟೀಸರ್ ಹಾಗೂ ಸಾಂಗ್ಸ್​ನಿಂದ ಪ್ರಮೋಷನ್ಸ್ ಕಿಕ್​​ಸ್ಟಾರ್ಟ್​ ಮಾಡಿದೆ ಟೀಂ. ಕೌನ್ರೆ ಉನೇ ಅನ್ನೋ ಬ್ಯಾಡ್ ಬಾಯ್ಸ್ ಸಾಂಗ್ ನೋಡುಗರನ್ನ ಅಕ್ಷರಶಃ ಸೈಕ್ ಮಾಡಿತ್ತು. ಅದೇ ಕಾರಣದಿಂದ ಐ ಲವ್ ಯೂ ಕಣೇ ಅನ್ನೋ ಸೈಕ್ ಸಾಂಗ್​ನ ರಿಲೀಸ್ ಮಾಡಿತು ಚಿತ್ರತಂಡ. ಅದೂ ಕೂಡ ಎಲ್ಲೆಡೆ ಸೂಪರ್ ಅನಿಸಿಕೊಂಡಿದೆ.

ಇದನ್ನೂ ಓದಿ: 73ನೇ ಜನ್ಮದಿನದ ಸಂಭ್ರಮದಲ್ಲಿ ಸೂಪರ್​ಸ್ಟಾರ್ ರಜನಿಕಾಂತ್​!

ಇನ್ನೇನು ರಿಲೀಸ್ ಡೇಟ್ ಅನೌನ್ಸ್ ಮಾಡೋಕೆ ಕಾತರರಾಗಿರೋ ದುನಿಯಾ ವಿಜಯ್​ರನ್ನ ಪ್ರತೀ ದಿನ ಅವ್ರ ಕತ್ರಿಗುಪ್ಪೆ ನಿವಾಸದ ಬಳಿ ನೂರಾರು ಫ್ಯಾನ್ಸ್ ಮೀಟ್ ಮಾಡ್ತಾರೆ. ಅದ್ರೆ ಈ ಬಾರಿ ವಿಶೇಷ ಚೇತನ ಅಭಿಮಾನಿಯನ್ನ ನೆಚ್ಚಿನ ನಟ ದುನಿಯಾ ವಿಜಯ್ ಮಗುವಿನಂತೆ ಎತ್ತಿಕೊಂಡು ಕುಶಲೋಪರಿ ಹಂಚಿಕೊಂಡ ಪರಿ ನಿಜಕ್ಕೂ ವ್ಹಾವ್ ಅನಿಸುತ್ತೆ.

ಯೆಸ್.. ಎರಡೂ ಕಾಲು ಇಲ್ಲದ ಅಭಿಮಾನಿಯೊಬ್ಬ ವಿಜಯ್​ರನ್ನ ಭೇಟಿಯಾಗಲು ಬಂದಾಗ, ಆತನ ನಿರೀಕ್ಷೆಗೂ ಮೀರಿ ಪ್ರೀತಿ ತೋರಿಸಿದ್ದಾರೆ ನಟ ವಿಜಿ. ಇದು ನಿಜಕ್ಕೂ ಒಬ್ಬ ನಟ ಹಾಗೂ ಅಭಿಮಾನಿಗಳ ನಡುವಿನ ಬಾಂಧವ್ಯದ ಪ್ರತೀಕವಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದು, ವಿಜಿ ಅವ್ರ ಹೃದಯ ವೈಶಾಲ್ಯತೆಗೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES