Friday, November 22, 2024

ಪರೀಕ್ಷಾ ಅಕ್ರಮ ನಡೆಸಿದರೇ 10 ಕೋಟಿ ರೂ. ದಂಡ!

ಬೆಂಗಳೂರು: ಸರ್ಕಾರ ನಡೆಸುವ ಶೈಕ್ಷಣಿಕ ಹಾಗೂ ನೇಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಠಿಣ ಕಾನೂನು ತರಲು ಮುಂದಾಗಿರುವ ಸರ್ಕಾರ ವಿಧೇಯಕವನ್ನು ಶಾಸನಸಭೆ ಮುಂದೆ ಮಂಡಿಸಿದೆ.

ಸಾರ್ವಜನಿಕ ಪರೀಕ್ಷೆಗಳ ಅಕ್ರಮ ಹಾಗೂ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಬಳಕೆ ಮಿತಿ ಮೀರುತ್ತಿರುವುದರಿಂದ ಕರ್ನಾಟಕ ಸಾರ್ವಜನಿಕ ಪರೀಕ್ಷೆ ವಿಧೇಯಕ-2023ನ್ನು ತರಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಪರೀಕ್ಷಾ ಅಕ್ರಮ ನಡೆಸಿದರೆ 10 ಕೋಟಿ ರೂ. ದಂಡ ವಿಧಸಲಾಗುತ್ತದೆಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ಬಿಯರ್​​​ ಬೇಡಿಕೆ: ಕಾರಣವೇನು ಗೊತ್ತಾ?

ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಹಾಗೂ ನೇಮಕ ಸಂಬಂಧಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗುತ್ತಿದ್ದರಿಂದ ಸರ್ಕಾರ ಮುಜುಗರ ಅನುಭವಿಸಿತ್ತು. ಎಷ್ಟೇ ಕಠಿಣ ಕ್ರಮಕೈಗೊಂಡರೂ ಅಕ್ರಮದ ಜಾಲ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿತ್ತು. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಹಾಗೂ ಹಿತಾಸಕ್ತಿಗಳಿಗೆ ಅಗಾಧ ಪ್ರಮಾಣದ ಹಣಕಾಸಿನ ಅನುಕೂಲ ಲಭ್ಯವಾಗಲಿದೆ. ಇದು ರಾಜ್ಯದ ಯುವ ಜನತೆಯ ಪ್ರಗತಿಯ ಅವಕಾಶಗಳನ್ನು ಕುಂಠಿತಗೊಳಿಸುತ್ತದೆ. ಸರ್ಕಾರಕ್ಕೂ ಹೊರೆ ಹೆಚ್ಚಿಸಲಿದೆ. ರಾಜ್ಯದ ಗೌರವಕ್ಕೂ ಚ್ಯುತಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

RELATED ARTICLES

Related Articles

TRENDING ARTICLES