ಬೆಂಗಳೂರು : 9 ಸಾವಿರ ಉದ್ಯೋಗಕ್ಕೆ ಅರ್ಜಿ ಆಹ್ವಾನ ನೀಡುತ್ತೇವೆ. ಮಾರ್ಚ್ ತಿಂಗಳಿನಲ್ಲಿ ಕರೆಯುತ್ತೇವೆ. 5,500 ಹೊಸ ಬಸ್ಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಾರಂಭದಲ್ಲಿ ಬಹಳ ಒತ್ತಡ ಇತ್ತು. ಕಂಡಕ್ಟರ್ ಹಾಗೂ ನಿರ್ವಾಹಕರಿಗೆ ಆರಂಭದಲ್ಲಿ ಸ್ವಲ್ಪ ತೊಂದರೆ ಆಯ್ತು. ಈಗ ಎಲ್ಲಾ ಸರಿ ಹೋಗಿದೆ ಎಂದು ತಿಳಿಸಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಹ ಸಿಎಂಗೆ ಪತ್ರ ಬರೆದಿದ್ದರು. ಕೇವಲ 15 ದಿನಗಳಲ್ಲಿ ಉಚಿತ ಬಸ್ ಪ್ರಯಾಣ ಕಾರ್ಯಕ್ರಮ ಚಾಲನೆ ಆಗಿತ್ತು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಶಕ್ತಿ ಯೋಜನೆ ಇಡೀ ದೇಶದಲ್ಲೇ ದೊಡ್ಡ ಕಾರ್ಯಕ್ರಮ. ತಮಿಳುನಾಡಿನಲ್ಲಿ ಇದೆ, ಸಿಟಿ ಬಸ್ ಮಾತ್ರವೇ ಅವಕಾಶ. ಮಹಾರಾಷ್ಟ್ರದಲ್ಲಿ ಅರ್ಧ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರು ನೆಂಟರ ಮನೆಗೆ ಹೋಗಿದ್ದಾರೆ
ಸಹಜವಾಗಿ ಹಳೆ ಬಸ್ನಲ್ಲೇ ಓಡಾಟ ನಡೆಸುತ್ತಿದ್ದರು. 13 ಸಾವಿರ ಜನರು ನಿವೃತ್ತಿ ಆಗಿದ್ರು. ಆದರೆ, ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಿಲ್ಲ. ಒಂದು ದಿನಕ್ಕೆ 1 ಲಕ್ಷ 58 ಸಾವಿರ ಟ್ರಿಪ್ಸ್ ಇರುತ್ತೆ. ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಮಹಿಳೆಯರು ನೆಂಟರ ಮನೆಗೆ ಹೋಗಿದ್ದಾರೆ. ಮಹಿಳೆಯರು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಂತಸ ವ್ಯಕ್ತಪಡಿಸಿದರು.