Monday, December 23, 2024

ಜಾತಿಗಣತಿ ದೇಶದ ಎಕ್ಸ್-ರೇ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸಲಿದೆ : ರಾಹುಲ್ ಗಾಂಧಿ

ರಾಜಸ್ಥಾನ : ಜಾತಿಗಣತಿ ದೇಶದ ‘ಎಕ್ಸ್-ರೇ’ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸಲಾಗುವುದು ಎಂದು ಹೇಳಿದ್ದಾರೆ.

ರಾಜಸ್ಥಾನದ ಉದಯಪುರದ ವಲ್ಲಭನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಸ್ಥಾನದಲ್ಲಿ ಜಾತಿಗಣತಿ ನಡೆಸಲಿದೆ. ನಮ್ಮ ಪಕ್ಷ ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರ ಮಟ್ಟದಲ್ಲಿಯೂ ಜಾತಿ ಗಣತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ರಾಜಸ್ಥಾನದ ಜನರು ಬಿಜೆಪಿಯ ಬಲೆಗೆ ಬೀಳಲು ಹೋಗುವುದಿಲ್ಲ, ಅವರು ಅವರ ಕ್ಯಾಚ್‌ಫ್ರೇಸ್‌ಗಳಿಗೆ ಬಲಿಯಾಗಲು ಹೋಗುವುದಿಲ್ಲ. ಕಾಂಗ್ರೆಸ್ ಮೇಲೆ ಇಲ್ಲಿನ ಜನರ ನಂಬಿಕೆ ಅಚಲವಾಗಿ ಉಳಿದಿದೆ. ಈ ನಂಬಿಕೆ ಮತ್ತು ಸಾರ್ವಜನಿಕರ ಬೆಂಬಲದ ಆಧಾರದ ಮೇಲೆ, ಕಾಂಗ್ರೆಸ್ ಮತ್ತೆ ರಾಜಸ್ಥಾನದಲ್ಲಿ ಸರ್ಕಾರವನ್ನು ರಚಿಸಲಿದೆ, ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಬರಲಿದೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಬಿಜೆಪಿ ರಾಜಸ್ಥಾನಕ್ಕೆ ಬಂದರೆ.. ಹಳೆಯ ಪಿಂಚಣಿ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್, ಆರೋಗ್ಯ ಯೋಜನೆ, ಇಂಗ್ಲಿಷ್ ಶಾಲೆ ಇತ್ಯಾದಿ ಸೌಲಭ್ಯಗಳನ್ನು ನಿಲ್ಲಿಸಲಾಗುವುದು. ಬಿಜೆಪಿ ಬಂದ ತಕ್ಷಣ ರಾಜಸ್ತಾನದಲ್ಲಿ ಅದಾನಿ ಸರ್ಕಾರ ಆರಂಭವಾಗಲಿದೆ. ರಾಜಸ್ಥಾನದಲ್ಲಿ ನಾವು 25 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ನೀಡುತ್ತಿದ್ದೇವೆ. ಇಲ್ಲಿ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡುತ್ತಿದ್ದೇವೆ. ನಮ್ಮ ಯೋಜನೆಗಳ ಹಣ ಅದಾನಿ ಜೇಬಿಗೆ ಸೇರುತ್ತಿಲ್ಲ, ಲಕ್ಷಾಂತರ ಜನರು ಇದರ ಲಾಭ ಪಡೆಯುತ್ತಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವಾಗಿದೆ.

RELATED ARTICLES

Related Articles

TRENDING ARTICLES