Friday, May 3, 2024

ಈಗ ಯುಗಾದಿ ಆಚರಣೆಯಾಗ್ತಿದೆ, ನಾಳೆ ವಿಜಯೋತ್ಸವ ಆಚರಣೆ ಮಾಡ್ತಿವಿ : ಎಂ.ಪಿ. ರೇಣುಕಾಚಾರ್ಯ

ಬೆಂಗಳೂರು : ಬಿ.ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂಬುದು ರೇಣುಕಾಚಾರ್ಯ ಕೂಗಲ್ಲ. ಈ ನಾಡಿನ ಪ್ರಜ್ಞಾವಂತರ ಅಪೇಕ್ಷೆಯಾಗಿತ್ತು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ‌ಅಮಿತ್ ಶಾ ಅವರಿಗೆ ಅಭಿನಂದನೆಗಳು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಜಯೇಂದ್ರರ ಸಂಘಟನೆ ಸಾಮರ್ಥ್ಯ ನೋಡಿ ಈ ಹುದ್ದೆ ಸಿಕ್ಕಿದೆ. ಈಗ ಯುಗಾದಿ ಹಬ್ಬ ಆಚರಣೆಯಾಗ್ತಿದೆ, ಇದು ಮಾಸ್ಟರ್ ಸ್ಟ್ರೋಕ್. ನಾಳೆ ವಿಜಯೋತ್ಸವ ಆಚರಣೆ ಮಾಡುವಂತೆ ಮನವಿ ಮಾಡ್ತಿವಿ ಎಂದು ತಿಳಿಸಿದರು.

ಮಾಜಿ ಸಿಎಂ ಬಿ.ಎಸ್ ಯಡಿಯುರಪ್ಪ ಅವರನ್ನ ಬೆಳಗ್ಗೆ ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ ಹೊರಟಿದ್ದೆ. ಕಾರ್ಯಕರ್ತರು ಪಕ್ಷದ ಮುಖಂಡರು ದೀಪಾವಳಿ ಹಬ್ಬದಲ್ಲಿ ಪಟಾಕಿ‌ ಹಚ್ಚುವ ಮೂಲಕ ಆಚರಣೆ ಮಾಡ್ತಿದ್ದಾರೆ. ಸಂಘಟನೆ ಚತುರ ಯಡಿಯೂರಪ್ಪ, ವಿಜಯೇಂದ್ರ ಸಂಘಟನೆ ನೋಡಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ ಎಂದು ಹೇಳಿದರು.

ವಿಜಯೇಂದ್ರಗೆ ನಾಯಕತ್ವದ ಅನುಭವವಿದೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಯಡಿಯೂರಪ್ಪ ಒಂದು ಗುಂಪಿನ ನಾಯಕರಲ್ಲ, ಸಂಘ ಪರಿವಾರ  ಅವರ ಹಿಂದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ. ಇನ್ನೂ ಸಂಘರ್ಷದ ಮಾತಿಲ್ಲ, ಏನಿದ್ರು ಸಾಮರಸ್ಯದಿಂದ ಒಂದಾಗಿ ಪಕ್ಷ ಸಂಘಟನೆ ಮಾಡಬೇಕು. ಯಡಿಯೂರಪ್ಪ ರಾಜ್ಯದ್ಯಂತ ಪ್ರವಾಸ ಮಾಡ್ತಾರೆ. ನಾನು ವಯಸ್ಸಿನಲ್ಲಿ ಹಿರಿಯ ಆದ್ರೆ, ವಿಜಯೇಂದ್ರ ಅವರಿಗೆ ನಾಯಕತ್ವದ ಅನುಭವವಿದೆ ಎಂದು ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಿ.ವೈ. ವಿಜಯೇಂದ್ರರನ್ನು ಕೊಂಡಾಡಿದರು.

RELATED ARTICLES

Related Articles

TRENDING ARTICLES