Wednesday, January 22, 2025

ಸರ್ಕಾರಕ್ಕೆ ಬಡತನ ಇದೆಯಾ? ಚಂದಾ ಎತ್ತಿ ದಸರಾ ಆಚರಿಸುತ್ತೇವೆ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಕ್ಯಾಬಿನೆಟ್ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಎರಡೂವರೆ ವರ್ಷದ ನಂತರ ಹಳಬರು ತೆಗೆದು ಹೊಸಬರು ಹಾಕುತ್ತೇವೆ ಅಂತಾರೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಅಶೋಕ್ ಪಟ್ಟಣ್ ಕ್ಯಾಬಿನೆಟ್ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್, ಶಾಸಕ ಅಶೋಕ್ ಪಟ್ಟಣ್ ಹೇಳಲು ಯಾರು ಎಂದು ಪ್ರಶ್ನಿಸಿದ್ದಾರೆ.

ಒಬ್ಬೊಬ್ಬ ಮಂತ್ರಿ ಒಂದೊಂದು ಹೇಳಿಕೆ ಕೊಡೋದು ಒಳ್ಳೆಯದಲ್ಲ. ಮುಖ್ಯಮಂತ್ರಿಗಳು ಗಮನ ಹರಿಸಲಿ ಈ ರೀತಿ ಸಚಿವರು ಹೇಳಿಕೆ ಕೊಡುವುದು ನಿಲ್ಲಿಸಲಿ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ವೈಭವವಾಗಿ ನಡೆಯುತ್ತದೆ. ಆದರೆ, ದಸರಾ ಆಚರಣೆಗೆ ಸರ್ಕಾರ ಕೇವಲ 20 ಲಕ್ಷ ರೂ. ಅಷ್ಟೇ ಕೊಟ್ಟಿದೆ. ಏಕೆ ಸರ್ಕಾರಕ್ಕೆ ಬಡತನ ಇದೆಯಾ? ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನೀವು ಹಣ ಕೊಡದಿದ್ದರೆ ಹೇಳಿ ನಾವು ಸಾರ್ವಜನಿಕರ ಬಳಿ ಚಂದಾ ಎತ್ತಿ ದಸರಾ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಳೆಗಟ್ಟಿದ ದಸರಾ ಸಂಭ್ರಮ

ಶಿವಮೊಗ್ಗದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ. ಬೂದು ಕುಂಬಳಕಾಯಿ, ಬಗೆಬಗೆಯ ಹೂ ದರ ಗಗನಕ್ಕೇರಿದೆ. ವಿವಿಧ ಹಣ್ಣುಗಳ ಬೆಲೆಯಲ್ಲೂ ಏರಿಕೆ ಕಂಡಿದ್ದು, ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿಳುತ್ತಿದ್ದಾರೆ.

RELATED ARTICLES

Related Articles

TRENDING ARTICLES