Wednesday, January 22, 2025

ರಾಹುಲ್ ಗಾಂಧಿ ಕಲೆಕ್ಷನ್ ಕೇಂದ್ರ ಬಿಂದು : ಡಿ.ವಿ. ಸದಾನಂದ ಗೌಡ

ಬೆಂಗಳೂರು : ಕಲೆಕ್ಷನ್ ಕೇಂದ್ರ ಬಿಂದು ರಾಹುಲ್ ಗಾಂಧಿ. ಕಲೆಕ್ಷನ್​ನಲ್ಲೂ ಪೈಪೋಟಿ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಕಲೆಕ್ಷನ್ ಫೈಟ್ ಶುರುವಾಗಿದೆ. ಸಿಎಂ ಕುರ್ಚಿಗಾಗಿ ಇಬ್ಬರು ಕಲೆಕ್ಷನ್ ಪೈಪೋಟಿಗೆ ಇಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಲೆಕ್ಷನ್ ವಂಶವೃಕ್ಷದ ಬಗ್ಗೆ ಫೋಸ್ಟರ್ ಬಿಡುಗಡೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯರ ಕಲೆಕ್ಷನ್ ಸುರ್ಜೇವಾಲರಿಂದ ಹೈಕಮಾಂಡ್​ಗೆ ಹೋಗ್ತದೆ. ಡಿಸಿಎಂ ಕಲೆಕ್ಷನ್ ಕೆ.ಸಿ ವೇಣುಗೋಪಾಲ್ ರಿಂದ ಹೋಗ್ತದೆ. ಇದರ ಲೂಟಿ ಪ್ಲ್ಯಾನಿಂಗ್ ನೋಡಿದ್ರೆ ನಮಗೆ ಆಶ್ಚರ್ಯ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ತಮ್ಮ ಮಗ ಹಾಗೂ ಅವರ ಸ್ವಜಾತಿ ಸಚಿವ ಭೈರತಿ ಸುರೇಶ್ ಅವರಿಂದ ವಸೂಲಿ, ರಾಮಯ್ಯ ಮತ್ತು ಕೆಂಪಣ್ಣರ ಮೂಲಕ ಹಣ ವಸೂಲಿ, ಇನ್ನೊಂದು ತಂಡ ಗುತ್ತಿಗೆದಾರರ ಉಪಾಧ್ಯಕ್ಷರ ತಂಡ. ಮೊನ್ನೆ ಉಪಾಧ್ಯಕ್ಷರ ಮನೆಯಲ್ಲಿ 42 ಕೋಟಿ ಸಿಕ್ಕಿದೆ. ಅಂಬಿಕಾಪತಿಯವರ ಮೂಲಕ ಶಿವಕುಮಾರ್ ಕಲೆಕ್ಷನ್ ಮಾಡಿಸ್ತಿದ್ದಾರೆ ಎಂದು ಆರೋಪ ಮಾಡಿದರು.

ರಾಜ್ಯದ ಖಜಾನೆ ಲೂಟಿ ಆಗ್ತಿದೆ

ಸಿಎಂ‌, ಡಿಸಿಎಂ ಹಾಗೂ ರಾಹುಲ್‌ ಗಾಂಧಿಯ ಪ್ಲಾನಾಪ್ ಆಕ್ಷನ್ ಬಿಡುಗಡೆ, ಇದು ಖಜಾನೆ ಖಾಲಿ ಮಾಡುವ ವ್ಯವಸ್ಥೆ ಆಗಿದೆ. 5 ತಿಂಗಳದರೂ ಸರ್ಕಾರದಿಂದ ಹೊಸ ಕೆಲಸಗಳನ್ನು ಪ್ರಾರಂಭ ಮಾಡಿಲ್ಲ. ಶಿವಕುಮಾರ್ ಬೆಳಗಾವಿಗೆ ಯಾವ ರೀತಿ ಕಲೆಕ್ಷನ್ ಮಾಡೋಕೆ ಹೋಗಿದ್ರು ಎಂದು ಜನರು ಮಾತಾಡ್ತಿದ್ದಾರೆ. ಎರಡು ಗುಂಪುಗಳಿಂದ ರಾಜ್ಯದ ಖಜಾನೆ ಲೂಟಿ ಆಗ್ತಿದೆ. ಅದಕ್ಕಾಗಿ ಇದರ ಬಗ್ಗೆ ಉನ್ನತ ತನಿಖೆ ಆಗಬೇಕು. ಸುರ್ಜೇವಾಲಾಗೆ ಸಿಎಂ ಮತ್ತು ಪುತ್ರ ಯತೀಂದ್ರ ಕಲೆಕ್ಷನ್ ಕಲೆಕ್ಟ್ ಮಾಡಿ ಕೊಡ್ತಾರೆ. ವೇಣುಗೋಪಾಲಗೆ ಡಿಕೆಶಿ ಕಲೆಕ್ಷನ್ ಸಂಗ್ರಹಿಸಿ ಕೊಡ್ತಿದ್ದಾರೆ ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES