Tuesday, May 21, 2024

ನಾನೇ ಜೆಡಿಎಸ್​ಗೆ ಮೊದಲನೇ ವಿರೋಧಿ ಆಗಿದ್ದೆ : ಶಾಸಕ ಎ ಮಂಜು

ಹಾಸನ : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹಾಸನ ಜಿಲ್ಲೆಯಲ್ಲಿ ಹೇಗೆ ವರ್ಕೌಟ್ ಆಗುತ್ತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅರಕಲಗೂಡು ಶಾಸಕ ಎ ಮಂಜು ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಜೆಡಿಎಸ್‌ ಪಕ್ಷಕ್ಕೆ ಮೊದಲನೇ ವಿರೋಧಿ ಇದ್ದೆ, ನಾನು ಈಗ ಅಡ್ಜಸ್ಟ್ ಆಗಿದ್ದೀನಲ್ಲ. ಇವತ್ತು ರಾಜಕೀಯದಲ್ಲಿ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ. ಪಕ್ಷ ಮತ್ತು ವೈಯಕ್ತಿಕ ವಿಚಾರಗಳಿಗಿಂತ ದೇಶಕ್ಕಾಗಿ ಇಬ್ಬರು ಒಟ್ಟಾಗಿರುವುದು ಸ್ವಾಗತ ಎಂದು ಹೇಳಿದ್ದಾರೆ.

ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಕೆಲ ಶಾಸಕರು ಬರುತ್ತಾರೆ ಎಂಬ ವಿಚಾರವಾಗಿ ಮಾತನಾಡಿ, ಅವರ ಹತ್ರಾನೇ ಹೌಸ್ ಫುಲ್ ಆಗಿದೆ, ಇನ್ನು ಯಾಕೆ ಕರೆಯುತ್ತಾರೆ? ಕಾಂಗ್ರೆಸ್ ಪಕ್ಷದಿಂದ ಹೋಗೋರನ್ನ ತಡೆಯುವುದಕ್ಕೆ ಈ ರೀತಿ ಮಾತನ್ನ ಹೇಳಿರಬಹುದು ಅಷ್ಟೇ ಎಂದು ತಿಳಿಸಿದ್ದಾರೆ.

ನಾನು ಬಗ್ಗೆ ಮಾತಾಡೋದು ಸರಿಯಲ್ಲ

ಡಿ.ಕೆ ಶಿವಕುಮಾರ್ ವಿರುದ್ಧ ತನಿಖೆಗೆ ಹೈಕೋರ್ಟ್ ಅಸ್ತು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಹೊಸ ವಿಚಾರವೇನಿಲ್ಲ, ಇದು ಹಳೆ ವಿಚಾರವೇ. ಯಾರ ಮೇಲೆ ಯಾವಾಗ ಬೇಕಾದರೂ ತನಿಖೆ ಆಗಬಹುದು. ನಾನು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿಬಿಐ ಏನು ಮಾಡುತ್ತಿದೆ ಎಂಬುದನ್ನು ಕೇಳೋದಕ್ಕೆ ಯಾರಿಗೂ ಹಕ್ಕಿಲ್ಲ. ಯಾವಾಗ? ಯಾರ ವಿರುದ್ಧ ಬೇಕಾದರೂ ಸಿಬಿಐ ತನಿಖೆ ನಡೆಸಬಹುದು ಎಂದು ಶಾಸಕ ಎ ಮಂಜು ಹೇಳಿದ್ದಾರೆ.

RELATED ARTICLES

Related Articles

TRENDING ARTICLES