ಬೆಂಗಳೂರು : ಬಾಂಗ್ಲಾದೇಶದ ವಿರುದ್ಧ ವಿರಾಟ್ ಕೊಹ್ಲಿ ಬೊಂಬಾಟ್ ಶತಕ ಸಿಡಿಸಿ ಮಿಂಚಿದರು. ಆದರೆ, ಕ್ರೀಸ್ನ ಮತ್ತೊಂದು ಬದಿಯಲ್ಲಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಅವರು ಕಿಂಗ್ ಕೊಹ್ಲಿಗೆ ಸಾಥ್ ನೀಡಿದರು.
ರಾಹುಲ್ ತಾಳ್ಮೆಯ ಆಟ ಹಾಗೂ ಕೊಹ್ಲಿ ಶತಕಕ್ಕೆ ನೀಡಿದ ಸಾಥ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆ.ಎಲ್ ರಾಹುಲ್ ಅಜೇಯ 34* ರನ್ ಸಿಡಿಸಿದರು. ಅರ್ಧಶತಕ ದಾಖಲಿಸಲು ರಾಹುಲ್ಗೆ ಸಾಕಷ್ಟು ಅವಕಾಶಗಳಿದ್ದವು.
ಗಳೆಯ ವಿರಾಟ್ಗಾಗಿ ತ್ಯಾಗಮೂರ್ತಿಯಾದ ರಾಹುಲ್ ಕೊಹ್ಲಿ ಶತಕವನ್ನು ತಾನೇ ಬಾರಿಸಿದಂತೆ ಸಂತೋಷಪಟ್ಟರು. ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ನಾಯಕ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಹಾಗೂ ರಾಹುಲ್ ಅವರನ್ನು ಅಪ್ಪಿ ಗೆಲುವನ್ನು ಸಂಭ್ರಮಿಸಿದರು.
26,000 ರನ್ ಪೂರೈಕೆ
ರನ್ ಮೆಷಿನ್ ವಿರಾಟ್ ಕೊಹ್ಲಿ ಇದೇ ವೇಳೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 26,000 ರನ್ ಗಳಿಸಿದ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾದರು. 35 ರನ್ ಪೂರೈಸಿದ ನಂತರ, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 25,957 ರನ್ ಗಳಿಸುವ ಮೂಲಕ ಶ್ರೀಲಂಕಾದ ದಿಗ್ಗಜ ಮಹೇಲ ಜಯವರ್ಧನೆ ಅವರ ದಾಖಲೆ ಮುರಿದರು.
ಜಯವರ್ಧನೆ 725 ಇನ್ನಿಂಗ್ಸ್ಗಳಲ್ಲಿ 25,957 ರನ್ಗಳಿಸಿದ್ದರೆ, ವಿರಾಟ್ ಕೊಹ್ಲಿ 567 ಇನ್ನಿಂಗ್ಸ್ಗಳಲ್ಲಿ 25,960 ರನ್ ಗಳಿಸಿದರು. ಇನ್ನೂ ಟಾಪ್ 3ರಲ್ಲಿ ಸಚಿನ್ 34,357(782 ಪಂದ್ಯಗಳು), ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ 28,016(666) ಹಾಗೂ ಆಸಿಸ್ ಮಾಜಿ ನಾಯಕ ರಿಕಿಇ ಪಾಂಟಿಂಗ್ 27,483(668) ಸ್ಥಾನ ಪಡೆದಿದ್ದಾರೆ.