Sunday, January 19, 2025

ಕರ್ನಾಟಕವನ್ನು ಹೈ ಕಮಾಂಡ್​ಗೆ ಒತ್ತೆ ಇಟ್ಟ ಭೂಪತಿ : ಡಿಕೆಶಿ ವಿರುದ್ಧ ಜೆಡಿಎಸ್ ಕಿಡಿ

ಬೆಂಗಳೂರು : ಡಿ.ಕೆ ಶಿವಕುಮಾರ್ ಕರ್ನಾಟಕವನ್ನು ಹೈ ಕಮಾಂಡ್​ಗೆ ಒತ್ತೆ ಇಟ್ಟ ಭೂಪತಿ. ಆಧುನಿಕ ಈಸ್ಟ್ ಇಂಡಿಯಾ ಕಂಪನಿಗಳ ಪೊಲಿಟಿಕಲ್ ಏಜೆಂಟ್, ಕರುನಾಡಿನ ಕರೋಡ್ ಪತಿ ಎಂದು ಜೆಡಿಎಸ್ ಲೇವಡಿ ಮಾಡಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್​, ಬದುಕೆಲ್ಲ ಬ್ರೋಕರೇಜ್ ಮಾಡಿಕೊಂಡೇ ಕೊಳ್ಳೆ ಹೊಡೆದ ವ್ಯಕ್ತಿ, ಈಗ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವುದೇ? ಅರೆರೆ.. ಇವರ SST, YST ಅಬ್ಬರ ಕಂಡು GSTಯೇ ಬೆಚ್ಚಿದೆ. ಇದೇ ನೋಡಿ ಕರ್ನಾಟಕದ ಮಾದರಿ ಎಂದು ಕುಹಕವಾಡಿದೆ.

ಕಾಂಗ್ರೆಸ್ ಪಕ್ಷವೇ ಪರ್ಸಂಟೇಜ್ ಪಟಾಲಂ. ಕಮೀಷನ್ ಕೈಂಕರ್ಯವೇ ಅದರ ರಾಜಧರ್ಮ. ಲೂಟಿ, ದಂಧೆ, ಅಕ್ರಮವೇ ಅದರ ಗ್ಯಾರಂಟಿ. ಅನ್ಯರಾಜ್ಯಗಳ ಚುನಾವಣೆ ಇವರಿಗೆ ಚಿನ್ನದ ಗಣಿ. ಹೈಕಮಾಂಡ್ ಆಸರೆಯೇ ಅಕ್ಷಯ ಪಾತ್ರೆ. ಇಂಥವರಿಗೆ ಕುಮಾರಸ್ವಾಮಿಯವರ ಕೂಗು ಕೇಳುವುದೇ? ಇಲಾಖೆಗೊಂದು ಹಿಟಾಚಿ ಇಟ್ಟುಕೊಂಡು 24X7 ಬಾಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಕರ್ನಾಟಕವನ್ನೇ ಪಾಪರ್ ಮಾಡುತ್ತಿದೆ

ಸ್ವತಃ ತಾನೇ ಕೊಳೆತು ನಾರುತ್ತಿದೆ. ಆದರೆ, ಪಕ್ಕದ ಮನೆ ಕಂಪೌಡಿನ ಮೇಲೆ ಮರದೆಲೆ ಬಿದ್ದಿದೆ ಎಂದು ಕಾಂಗ್ರೆಸ್ ಅಂಗೈ ಪರಚಿಕೊಳ್ಳುತ್ತಿದೆ. ಪರಚಿಕೊಳ್ಳುವುದರ ಜತೆಗೆ, ಕರ್ನಾಟಕವನ್ನೇ ಪಾಪರ್ ಮಾಡುವುದೇ ಪರ್ಸಂಟೇಜ್ ಪಟಾಲಂ ಹಾಕಿಕೊಂಡಿರುವ ಏಕೈಕ ಗುರಿ. ಅದರ ಪಾಲಿಗೆ ಹೈ ಕಮಾಂಡ್ ಸೇವೆಯೇ ಆನಂದದಾಯಕ ಸೇವೆ ಎಂದು ಹರಿಹಾಯ್ದಿದೆ.

RELATED ARTICLES

Related Articles

TRENDING ARTICLES