ಬೆಂಗಳೂರು : ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು 190 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ಪ್ರಪೋಸಲ್ ಕೊಟ್ಟಿದ್ದೇವೆ. ಟೆಂಡರ್ ಕರೆಯಬೇಕು. ಟನಲ್ ಬೋರಿಂಗ್ ಮಷಿನ್ಸ್ ನಮ್ಮಲ್ಲಿ ಚಿಕ್ಕದಿವೆ. ಮಿನಿಮಮ್ ನಾಲ್ಕು ಲೇನ್, ಗರಿಷ್ಠ ಆರು ಲೇನ್ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ರೋಡ್, ಓಲ್ಡ್ ಮದ್ರಾಸ್ ರೋಡ್, ಟ್ರಿನಿಟಿ ಸರ್ಕಲ್, ಏರ್ ಪೋರ್ಟ್ ರೋಡ್, ಕನಕಪುರ ರಸ್ತೆಯಿಂದ ಕೆ.ಆರ್ ಪುರ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್ ಸೇರಿ 190 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ಪ್ರಪೋಸಲ್ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಗಾಲ್ಫ್, ಪ್ಯಾಲೇಸ್ ಗ್ರೌಂಡ್, ಟರ್ಫ್ ಕ್ಲಬ್ ಕಡೆ ಮಾತ್ರ ಜಾಗ ಇರೋದು. ಟರ್ಫ್ ಕ್ಲಬ್ ಬೇರೆ ಕಡೆ ಹೋಗಿ ಅಂತ ಹೇಳ್ತಿದ್ದೀವಿ. ನನಗೆ ಜವಾಬ್ದಾರಿ ಏನ್ ಕೊಟ್ಟಿದ್ದಾರೆ ಅದನ್ನ ಮಾಡ್ತೀವಿ. ಕೋಳಿನ ಕೇಳಿಕೊಂಡು ಮಸಾಲೆ ಅರಿಯಬೇಕಾ. ವಿಪಕ್ಷದವ್ರನ್ನ ಕೇಳಬೇಕಾ ಎಂದು ಗರಂ ಆಗಿದ್ದಾರೆ.
350 ಕಿ.ಮೀ. ಟೆಂಡರ್ ಶ್ಯೂರ್ ರೋಡ್
ರಸ್ತೆಗುಂಡಿ ಮುಚ್ಚಲು ಪೊಲೀಸ್ ಇಲಾಖೆಯೊಂದಿಗೆ ಕೋ ಆರ್ಡಿನೇಶನ್ ಮಾಡಿಕೊಳ್ಳಿ ಎಂದು ಹೇಳಿದ್ದೇನೆ. ಸಾರ್ವಜನಿಕರು ಕೂಡ ರಸ್ತೆಗುಂಡಿ ಫೋಟೋ ಹಿಡಿದು ಕಮಿಷನರ್ಗೆ ಕಳುಹಿಸಬಹುದು. ನಿನ್ನೆ ಮೇಜರ್ ಡಿಸಿಷನ್ ತಗೊಂಡಿದ್ದೀನಿ. 350 ಕಿ.ಮೀ. ಟೆಂಡರ್ ಶ್ಯೂರ್ ರೋಡ್ ಆಗಿದೆ. ಕೂಡಲೇ ಸರ್ವೀಸಸ್ ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಸ್ಟಾರ್ಮ್ ವಾಟರ್ ಡ್ರೈನ್ಗೆ 1,500 ಕೋಟಿ
ಕೇಬಲ್ಗಳನ್ನ ಅಳವಡಿಕೆ ಮಾಡಿದ್ದಾರೆ, ಅದೆಲ್ಲಾ ಕಟ್ ಮಾಡಬೇಕಾಗುತ್ತೆ. ವರ್ಲ್ಡ್ ಬ್ಯಾಂಕ್ ನಿಂದ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪ್ರಪೋಸಲ್ ಬಂದಿದೆ. ಒಂದೂವರೆ ಸಾವಿರ ಕೋಟಿ ಸ್ಟಾರ್ಮ್ ವಾಟರ್ ಡ್ರೈನ್ಗೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆದಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.