Sunday, December 22, 2024

ಅಮೇರಿಕನ್ ಡೈಮಂಡ್ ಹರಳುಗಳಿಂದ ಸಿದ್ದವಾದ ಗಣಪತಿ

ಹುಬ್ಬಳ್ಳಿ : ಗಣೇಶ ಆಚರಣೆಯ ಹಿನ್ನೆಲೆ 12 ಲಕ್ಷ ರೂಪಾಯಿ ಮೌಲ್ಯದ ಅಮೇರಿಕನ್ ಡೈಮಂಡ್ ಹರಳುಗಳಿಂದ ಸಿದ್ಧವಾದ ಗಣಪತಿ ನಗರದ ಬಮ್ಮಾಪುರದಲ್ಲಿ ನಿರ್ಮಾಣವಾಗಿದೆ.

ಗಣೇಶ ಚತುರ್ಥಿ ಹಿನ್ನೆಲೆ ಹುಬ್ಬಳ್ಳಿಯ ಬಮ್ಮಾಪುರ ನಿವಾಸಿಯಾದ ಮಹೇಶ ಮುರಗೋಡ ಮೂರ್ತಿ ಕಲಾವಿದ. ಎಂಬುವವರು ಮುಖವೊಂದನ್ನು ಬಿಟ್ಟು, ಇನ್ನುಳಿದ ಎಲ್ಲ ಭಾಗಕ್ಕೆ 12 ಲಕ್ಷ ರೂಪಾಯಿ ಮೌಲ್ಯದ ಅಮೇರಿಕನ್ ಡೈಮಂಡ್ ಹರಳು ಹಾಗೂ ನವರತ್ನ ಹರಳುಗಳನ್ನು ಹಾಕಿದ 5.7 ಅಡಿ ಎತ್ತರದ ಸುಮಾರು 150 ಕೆಜಿ ತೂಕ ಹೊಂದಿರುವ ವಿನಾಯಕನನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನು ಓದಿ : ದೇವಸ್ಥಾನದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ.. ಸಬ್ಸಿಡಿ ಪಡೆಯಿರಿ : ರಾಮಲಿಂಗರೆಡ್ಡಿ

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಸ್ವಸ್ತಿಕ ಯುವಕರ ಸಂಘದವರು ಅಮೇರಿಕನ್ ಡೈಮಂಡ್ ಹರಳುಗಳಿಂದ ಅಲಕೃಂತ ಮಾಡಿ , ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಿಕೊಂಡು ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಹಾಗೆಯೇ ಪ್ರತಿಷ್ಠಾಪನೆ ಮಾಡಿ 7 ದಿನಗಳವರೆಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿರುವ ಯುವಕರ ಸಂಘ.

ಅದೇ ರೀತಿಯಲ್ಲಿ ಈ ವರ್ಷವೂ ಸುಮಾರು 60 ಸಾವಿರ  ಹರಳುಗಳಿಂದ ಸಿದ್ಧವಾದ ಗಣೇಶನನ್ನು, ನಿನ್ನೆ ನಗರದಿಂದ ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದು, ಬೆಂಗಳೂರಿನ ರಾಜಾಜಿನಗರ 2ನೇ ಹಂತ ಮಿಲ್ಕ ಕಾಲೋನಿ 5 ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘದವರು ಸೇರಿ ಸೆಪ್ಟೆಂಬರ್ 18 ರಂದು ಪ್ರತಿಷ್ಠಾಪನೆ ಮಾಡಲಿದ್ದಾರೆ.

ಈ ಐಶ್ವರ್ಯ ಗಣೇಶ ಮಾದರಿಯಲ್ಲಿ ವಿನಾಯಕ ಮೂರ್ತಿಯನ್ನು ನಿರ್ಮಿಸಿದ್ದು, ಅದ್ದೂರಿಯಾಗಿ ವಿನಾಯಕನ ಆಚರಣೆ ಮಾಡಲಿರುವ ಯುವಕ ಸಂಘದವರು.

RELATED ARTICLES

Related Articles

TRENDING ARTICLES