Wednesday, January 1, 2025

ನಟ ಪ್ರಕಾಶ್ ರಾಜ್ ರೈ ಆಗಮನಕ್ಕೆ ಹಿಂದೂ ಜಾಗೃತಿ ಸೇನೆ ವಿರೋಧ

ಕಲಬುರಗಿ : ಕಲಬುರಗಿಗೆ ಬಹುಭಾಷಾ ಖ್ಯಾತ ನಟ ಪ್ರಕಾಶ್ ರಾಜ್ ರೈ ಆಗಮನದ ಹಿನ್ನೆಲೆ ನಗರಕ್ಕೆ ರೈಗೆ ನಿರ್ಬಂಧ ಹೇರುವಂತೆ ಪ್ರತಿಭಟನೆ ಮಾಡುತ್ತಿರುವ ಹಿಂದೂ ಜಾಗೃತಿ ಸೇನೆ.

ಪಂಡಿತ್ ರಂಗಮಂದಿರದಲ್ಲಿ ನಡೆಯಲಿರುವ ಗಾಯಾನ, ನಾಟಕ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಪ್ರಕಾಶ್ ರೈ. ಈ ಹಿನ್ನೆಲೆ ಕೋಮು ಭಾವನೆಗೆ ಧಕ್ಕೆ ತರುವಂತೆ ಪ್ರಚೋದನಾತ್ಮಕ ಮಾತುಗಳನ್ನು ಆಡುತ್ತಾರೆ ಎಂದು ನಗರದ ಜಗತ್ ವೃತ್ತದಿಂದ ಪ್ರತಿಭಟನೆ ನಡೆಸುತ್ತಿರುವ ಹಿಂದೂ ಜಾಗೃತಿ ಸೇನೆ.

ಪ್ರಕಾಶ್ ರಾಜ್ ರೈಗೆ ನಿರ್ಬಂಧ ಹೇರುವಂತೆ ನಿನ್ನೆ‌ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಪ್ರಕಾಶ್ ರಾಜ್ ರೈ ಅವರು ಬಂದಿದ್ದ ಹಿನ್ನೆಲೆ ಆಕ್ರೋಶಗೊಂಡ ಸೇನೆಯವರು, ಕಪ್ಪು ಬಟ್ಟೆಯನ್ನು ಹಿಡಿದು ಪ್ರತಿಭಟನೆಯಲ್ಲಿ ತೋರಿಸುತ್ತಾ ಲಕ್ಷ್ಮಿಕಾಂತ್ ಸ್ವಾದಿ‌ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಇದನ್ನು ಓದಿ : ಬಸವಣ್ಣನ ವಿಚಾರಧಾರೆಯ ಪ್ರಚಾರಕ ಶ್ರೀಗಳಿಗೆ ಮತ್ತೆ ಜೀವ ಬೆದರಿಕೆ

ಪ್ರತಿಭಟನೆಯಿಂದ ಗಲಭೆ ಜಾಸ್ತಿಯಾಗಿದ್ದು, ಜಗತ್ ವೃತ್ತದಲ್ಲೇ ಪ್ರತಿಭಟನಾಕಾರರನ್ನು ತಡೆದು, ಹಿಂದೂ ಜಾಗೃತಿ ಸೇನೆ ಕಾರ್ಯಕರ್ತನನ್ನು ಬಂಧಿಸಿದ ಪೊಲೀಸರು.

RELATED ARTICLES

Related Articles

TRENDING ARTICLES