ಪ್ರೀತಿಯಿಂದ ಸಾಕಿದ್ದ ನಾಯಿ ಸಾವು : ನೇಣಿಗೆ ಶರಣಾದ ಯುವಕ !

ನೆಲಮಂಗಲ : ಪ್ರೀತಿಯಿಂದ ಸಾಕಿದ್ದ ನಾಯಿ ಸಾವಿಗೀಡಾದ ಬೇಸರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು ರಾಜಶೇಖರ್​(33) ಎಂದು ಗುರುತಿಸಲಾಗಿದೆ.

ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರ ಗ್ರಾಮದ ರಾಜಶೇಖರ್ ಎಂಬಾತ 9 ವರ್ಷದ ಹಿಂದೆ ಜರ್ಮನ್​ಶೆಫರ್ಡ್​ ತಳಿಯ ನಾಯಿಯನ್ನು ಖರೀದಿಸಿ ತಂದಿದ್ದನು. ಅದಕ್ಕೆ ‘ಬೌನ್ಸಿ’ ಎಂದು ನಾಮಕರಣ ಮಾಡಿದ್ದನು. ಅತ್ಯಂತ ಪ್ರೀತಿಯಿಂದ ನಾಯಿಯನ್ನು ಸಾಕಿದ್ದನು .

ಇದನ್ನೂ ಓದಿ : ಹೊಸ ವರ್ಷಕ್ಕೆ 1.22 ಲಕ್ಷ ಕಾಂಡೋಮ್​ ಮಾರಾಟ : ಚಾಕ್​ಲೇಟ್​ ಪ್ಲೇವರ್​ಗೆ ಹೆಚ್ಚು ಬೇಡಿಕೆ ಎಂದ ಬ್ಲಿಂಕ್​ಇಟ್​ !

ಆದರೆ ನಿನ್ನೆ (ಡಿಸೆಂಬರ್.31) ಬೌನ್ಸಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಮೃತ ಪಟ್ಟ ಹಿನ್ನಲೆಯಲ್ಲಿ ತೀವ್ರ ದುಖಃದಲ್ಲಿದ್ದ ರಾಜಶೇಖರ್ ತನ್ನ ಜಮೀನಿನಲ್ಲೆ​ ನಾಯಿಯ ಅಂತ್ಯಸಂಸ್ಕಾರ ಮಾಡಿ ಮುಗಿಸಿ ಮನೆಗೆ ಬಂದಿದ್ದನು. ಆದರೆ ಬುಧವಾರ ಬೆಳಿಗ್ಗೆ ತನ್ನ ಮನೆಯಲ್ಲಿಯೆ ನಾಯಿಗೆ ಬಳಸುತ್ತಿದ್ದ ಚೈನ್​ ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ  ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES