Tuesday, May 21, 2024

WWE ಸ್ಟಾರ್ ಜಾನ್ ಸೀನಾ ಭೇಟಿಯಾದ ನಟ ಕಾರ್ತಿ: ಫೋಟೊ ವೈರಲ್​!

ಹೈದರಾಬಾದ್ : ರೆಸ್ಟ್ಲಿಂಗ್​ ಚಾಂಪಿಯನ್​ಷಿಪ್​ ನಲ್ಲಿ ಪಾಲ್ಗೊಳ್ಳಲು ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ wwe ಸೂಪರ್​ ಸ್ಟಾರ್​ ಜಾನ್​ ಸೀನಾ ಅವರನನ್ನು ತಮಿಳುನಟ ಕಾರ್ತಿ ಭೇಟಿಯಾಗಿದ್ದು​ ಸೀನಾ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸದ್ಯ ವೈರಲ್​ ಆಗಿದೆ.

WWE ಸೂಪರ್​ಸ್ಟಾರ್​ ಸ್ಪೆಕ್ಟಾಕಲ್​ 2023 ನಲ್ಲಿ ಪಾಲ್ಗೊಳ್ಳಲು wwe ರೆಸ್ಟ್ಲರ್​ಗಳು ಹೈದರಾಬಾದ್​ನ ರಾಮೋಜಿ ಫಿಲ್ಮ್​ಸಿಟಿಗೆ ಆಗಮಿಸಿದ್ದರು. ಇವರೊಂದಿಗೆ ಜಾನ್​ ಸೀನಾ ಅವರೂ ಕೂಡ ಆಗಮಿಸಿದ್ದರು. ಈವೇಳೆ ಜಾನ್​ ಸೀನ ಅವರನ್ನು ತಮಿಳುನಟ ಕಾರ್ತಿ ಪ್ರತ್ಯೇಕವಾಗಿ ಭೇಟಿ ಆಗಿ ಫೋಟೊ ಒಂದನ್ನು ತೆಗೆಸಿಕೊಂಡಿದ್ದಾರೆ.  ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಂಗನಾಗೆ ಕಪಾಳಮೋಕ್ಷ ಮಾಡ್ತೀನಿ: ಪಾಕ್​​​ ನಟಿ

ಸಣ್ಣವಯಸ್ಸಿನಿಂದ wwe ರೆಸ್ಟ್ಲಿಂಗ್ ನೋಡಿಕೊಂಡು ಬೆಳೆದಿರುವ ನಟ ಕಾರ್ತಿ, wwe ರೆಸ್ಟ್ಲಿಂಗ್​ನ ದೊಡ್ಡ ಫ್ಯಾನ್​ ಕೂಡಾ ಹೌದು. ಶುಕ್ರವಾರ ತಮ್ಮ ನೆಚ್ಚಿನ ರೆಸ್ಟ್ಲರ್​ರನ್ನು ಭೇಟಿಯಾಗಿ ಸ್ವಲ್ಪಹೊತ್ತು ಅವರೊಂದಿಗೆ ಕಾಲಾ ಕಳೆದಿರುವ ನಟ ಕಾರ್ತಿ ತಮ್ಮ ಅನುಭವವನ್ನು ಪೋಸ್ಟ್​ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Karthi Sivakumar (@karthi_offl)

RELATED ARTICLES

Related Articles

TRENDING ARTICLES