Sunday, May 19, 2024

ಕಂಗನಾಗೆ ಕಪಾಳಮೋಕ್ಷ ಮಾಡ್ತೀನಿ: ಪಾಕ್​​​ ನಟಿ

ಪಾಕಿಸ್ತಾನ : ಪಾಕಿಸ್ತಾನದ ನಟಿ ನೌಶಿನ್​ ಷಾ ಅವರು ಕಂಗನಾ ರಣಾವತ್​ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಸಾಧ್ಯವಾದರೆ ಆಕೆಯ ಕಪಾಳ ಮೋಕ್ಷ ಮಾಡುವೆ, ಆಕೆಯೊಬ್ಬ ತಿಳಿಗೇಡಿ ಹೆಂಗಸು ಎಂದಿದ್ದಾರೆ.

ಕಾಂಟ್ರವರ್ಸಿ ಕ್ವೀನ್​ ಎಂದೇ ಪ್ರಸಿದ್ಧರಾದವರು ನಟಿ ಕಂಗನಾ ರಣಾವತ್. ದೇಶ, ಧರ್ಮದ ವಿಚಾರದಲ್ಲಿ ಅವರು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುತ್ತಲೇ ವಿವಾದಕ್ಕೆ ಈಡಾಗುತ್ತಾರೆ. ಸದ್ಯ, ಪಾಕಿಸ್ತಾನದ ಸೇನೆಯ ಕುರಿತೂ ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಜನರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದೂ ಹೇಳಿದ್ದರು.

ಇದನ್ನೂ ಓದಿ: ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್​!

ಇದೀಗ ಇವರ ವಿರುದ್ಧ ಪಾಕಿಸ್ತಾನದ ನಟಿ ನೌಶೀನ್ ಷಾ ಕಿಡಿಕಾರಿದ್ದಾರೆ. ಕಂಗನಾಗೆ ಇತರರ ಬಗ್ಗೆ ಗೌರವವಿಲ್ಲ. ಆಕೆಯೊಬ್ಬ ತಿಳಿಗೇಡಿ ಹೆಂಗಸು. ಆಕೆಗೆ ಹೇಗೆ ಮಾತನಾಡಬೇಕು ಎಂಬ ಸಾಮಾನ್ಯ ಅರಿವೂ ಇಲ್ಲ. ಹಾಗಾಗಿ ಆಕೆ ನನ್ನ ಕೈಗೆ ಸಿಕ್ಕರೆ ಕಪಾಳಮೋಕ್ಷ ಮಾಡಬೇಕಿದೆ ಎಂದು ನೌಶಿನ್‌ ಷಾ ಹೇಳಿದ್ದಾರೆ. ಪಾಕಿಸ್ತಾನದ ಹದ್ ಕರ್ ದಿ ಚಾಟ್ ಶೋನಲ್ಲಿ ಭಾಗವಹಿಸಿದ್ದ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

RELATED ARTICLES

Related Articles

TRENDING ARTICLES