Friday, May 17, 2024

ಮೋದಿ-ಗೌಡ್ರು ಕೈ ಕೈ ಹಿಡ್ಕೊಂಡಿದ್ದು ನೋಡಿದ್ದೇನೆ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿರುವ ಅವರು, ಹೌದು.. ಒಂದಾಗಿದ್ದಾರೆ ಅನ್ನೋದನ್ನು ಕೇಳಿದ್ದೇನೆ. ಹೆಚ್​.ಡಿ ದೇವೇಗೌಡರು ಮತ್ತು ನರೇಂದ್ರ ಮೋದಿ ಕೈ ಕೈ ಹಿಡಕೊಂಡಿದ್ದು ನೋಡಿದ್ದೇನೆ ಎಂದು ಕುಟುಕಿದ್ದಾರೆ.

ಅವರಿಬ್ಬರ ಮಧ್ಯೆ ಯಾವ ರೀತಿ ಮೈತ್ರಿ? ಯಾರಿಗೆ ಎಷ್ಟು ಸೀಟು ಹಂಚಿಕೆ? ಅನ್ನೋದು ಇನ್ನೂ ಸ್ಪಷ್ಟ ಆಗಿರಲಿಕ್ಕಿಲ್ಲ. ಅವರಿಬ್ಬರು ಒಂದಾಗಬಹುದು ಅನ್ನೋ ಲಕ್ಷಣಗಳು ಕಾಣುತ್ತಿವೆ. ಆದರೆ, ನಮ್ಮನ್ನು ಯಾರೂ ಹತ್ತಿಡಲು ಆಗೋದಿಲ್ಲ. ದೇಶದಲ್ಲಿ ವಿರೋಧ ಪಕ್ಷಗಳೆಲ್ಲರೂ ಸೇರಿ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಬಸವೇಶ್ವರ ತತ್ವ ಸರಿಯೇ? ಅಂತ ಡಿಬೆಟ್ ಮಾಡೋಣ : ಮಲ್ಲಿಕಾರ್ಜುನ ಖರ್ಗೆ

ಅವರಿಬ್ಬರು ಯಾಕೆ ಒಂದಾಗಿದ್ದಾರೆ?

ಮೈತ್ರಿಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಸಭೆಗಳು ಮುಗಿದಿವೆ. ನಾಲ್ಕನೇ ಮೀಟಿಂಗ್ ನಾರ್ಥ್ ಇಂಡಿಯಾದಲ್ಲಿ ಮಾಡ್ತೆವೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ನಾನು ಕಮೆಂಟ್ ಮಾಡೋದಿಲ್ಲ. ಜೆಡಿಎಸ್​ನವರು ಮೊದಲಿನಿಂದಲೂ ಸೆಕ್ಯುಲರ್ ಅಂತ ಹೇಳಿಕೊಂಡವರು. ಈಗ ಯಾವ ವಿಷಯಗಳ ಮೇಲೆ ಒಂದಾಗಿದ್ದಾರೆ ಅವರೇ ಹೇಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES