Friday, May 17, 2024

ಬಸವೇಶ್ವರ ತತ್ವ ಸರಿಯೇ? ಅಂತ ಡಿಬೆಟ್ ಮಾಡೋಣ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ನಾನು ಧರ್ಮದಲ್ಲಿ ರಾಜಕೀಯ ಮಾಡಲಾರೆ. ಆ ಬಗ್ಗೆ ಮಾತನಾಡಲಾರೆ. ಧಾರ್ಮಿಕತೆಯ ಬಗ್ಗೆ ಮಾತನಾಡಿದ್ದು ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಧರ್ಮದ ವಿಚಾರ ಬಂದಾಗ ಬಸವೇಶ್ವರ ತತ್ವ ಸರಿಯೋ? ನಾರಾಯಣಗುರು ಸರಿಯೋ? ಅಂಬೇಡ್ಕರ್ ಸಂವಿಧಾನ ಸರಿಯೋ? ಅಂತ ಡಿಬೆಟ್ ಮಾಡೋಣ. ಧಾರ್ಮಿಕ ಸಂದರ್ಭ ಬಂದಾಗ ಆ ಬಗ್ಗೆ ಡಿಬೆಟ್ ಮಾಡೋಣ. ಈಗ ನಮ್ಮ ಗುರಿ ರಾಜಕೀಯವಾಗಿ ಒಂದಾಗಿ ಬಹುಮತ ಪಡೆಯೋದು. ನಾವು ಬೇರೆ ಬೇರೆ ಪಕ್ಷಗಳೊಂದಿಗೆ ರಾಜಕೀಯವಾಗಿ ಒಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಸ್ಟಾಲಿನ್ ಹೇಳಿದ್ದೇನು?

ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ಸನಾತನ ವಿರೋಧಿ ಸಮ್ಮೇಳನ ಎಂಬುದಾಗಿ ಆಯೋಜಿಸುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನ ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು ಎಂದು ಉದಯನಿಧಿ ಸ್ಟಾಲಿನ್‌ ಹೇಳಿದ್ದರು.

RELATED ARTICLES

Related Articles

TRENDING ARTICLES