Saturday, September 21, 2024

ಎತ್ತಿನಗಾಡಿ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕ ಸಾವು

ಚಿಕ್ಕಮಗಳೂರು : ಎತ್ತಿನ‌ಗಾಡಿಯ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ನಡೆದಿದೆ.

ಭರತ್ (25) ಮೃತ ದುರ್ದೈವಿ. ಈತ ಅಜ್ಜಂಪುರ ಮೂಲದವನು. ವೇಗವಾಗಿದ್ದ ಎತ್ತಿನಗಾಡಿ ನೊಗ ತಲೆಗೆ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಅಜ್ಜಂಪುರದಲ್ಲಿ ಜೋಡಿ ಎತ್ತಿನಗಾಡಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯ ಕೊನೆಯಲ್ಲಿ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಫೈನಲ್ ಸುತ್ತಿನ ಅಂತಿಮ ಸ್ಪರ್ಧೆಯಲ್ಲಿ ಮೃತ ಭರತ್ ನೊಗ ಹಿಡಿಯಲು ಹೋಗಿದ್ದ.

ಅಪಘಾತದಲ್ಲಿ ಚಿರತೆ ಸಾವು

ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿರುಗ ಘಟನೆ ತಡರಾತ್ರಿ ಚಿಕ್ಕಬಳ್ಳಾಪುರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ-7ರ ಮೆಡಿಕಲ್ ಕಾಲೇಜ್ ಬಳಿ ನಡೆದಿದೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಚಿರತೆಯನ್ನು ಚಿಕ್ಕಬಳ್ಳಾಪುರ ಅರಣ್ಯಾಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES