ಕಿಂಗ್ ಕೊಹ್ಲಿಯ ಶ್ವಾನ ಪ್ರೀತಿ!

ಕ್ಯಾಂಡಿ: ಏಷ್ಯಾಕಪ್‌ನ ಸೂಪರ್-4 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ಸೆಪ್ಟೆಂಬರ್ 10 ರಂದು ಮುಖಾಮುಖಿಯಾಗಲಿದ್ದು ಈ ಪಂದ್ಯ ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಅಭ್ಯಾಸದ ಸ್ಥಳಕ್ಕಾಗಮಿಸಿದ ಪುಟ್ಟ ಅತಿಥಿಯ ಜೊತೆಗೆ ಕೊಂಚ ಸಮಯ ಕಳೆದಿದ್ದು ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಕೊಹ್ಲಿಯ ಪ್ರಾಣಿ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: WWE ಸ್ಟಾರ್ ಜಾನ್ ಸೀನಾ ಭೇಟಿಯಾದ ನಟ ಕಾರ್ತಿ: ಫೋಟೊ ವೈರಲ್​!

ವಾಸ್ತವವಾಗಿ, ಸೆ. 8 ರಂದು ಮಳೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದರಿಂದಾಗಿ ಟೀಂ ಇಂಡಿಯಾ ಆಟಗಾರರು ಮೈದಾನಕ್ಕಿಳಿದು ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದ ಜಾಗಕ್ಕೆ ಪುಟ್ಟ ನಾಯಿ ಮರಿಯೊಂದು ಬಂದಿದೆ. ಪುಟ್ಟ ಶ್ವಾನವನ್ನು ನೋಡಿದ ವಿರಾಟ್, ಅದನ್ನು ತನ್ನ ಬಳಿಗೆ ಕರೆದಿದ್ದಾರೆ. ಶ್ವಾನ ಕೂಡ ಕೊಹ್ಲಿ ಕರೆದ ಕೂಡಲೇ ಅವರ ಬಳಿಗೆ ಧಾವಿಸಿದೆ. ಕೊಂಚ ಸಮಯ ಶ್ವಾನದ ಮರಿಯನ್ನು ವಿರಾಟ್ ಮುದ್ದಾಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

 

RELATED ARTICLES

Related Articles

TRENDING ARTICLES