Thursday, May 2, 2024

ಡಿಕೆಶಿ ನೀರಾವರಿ ಮಂತ್ರಿನಾ? : ಅಶ್ವತ್ಥನಾರಾಯಣ

ಮಂಡ್ಯ : ತಮಿಳುನಾಡಿನ ಸಿಎಂ ಸ್ಟಾಲಿನ್ ಹಾಗೂ ಡಿಕೆಶಿ ಬ್ರದರ್ಸ್. ಡಿ.ಕೆ ಶಿವಕುಮಾರ್ ತಮಿಳುನಾಡಿನ ಪರ ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಕುಟುಕಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ಇಲ್ಲ. ಡಿ.ಕೆ ಶಿವಕುಮಾರ್ ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ನೀರಾವರಿ ಸಚಿವ ಕರ್ನಾಟಕದ ನೀರಾವರಿ ಮಂತ್ರಿನಾ? ಸುಪ್ರೀಂ ಕೋರ್ಟ್ ಆದೇಶ ಬರೋ ಮುನ್ನ ಇವರೇ ನಿರ್ಧಾರ ತೆಗೆದುಕೊಳ್ತಾರೆ. ತಮಿಳುನಾಡಿನ ಪರ ಡಿಕೆ ಶಿವಕುಮಾರ್ ನಿಂತಿದ್ದಾರೆ. ಡಿಕೆಶಿ ಸಭೆ ಕರೆಯದೆ ನೇರವಾಗಿ ನೀರು ಬಿಟ್ಟಿದ್ದಾರೆ. ನೀರಾವರಿ ಸಲಹಾ ಸಮಿತಿಯ ಸಭೆ ಕರೆಯದೆ ನೀರು ಬಿಟ್ಟಿರುವುದು ಸರಿಯಲ್ಲ. ಸಂಕಷ್ಟ ಸೂತ್ರದ ಬಗ್ಗೆಯೂ ಸಹ ನಿರ್ಧಾರ ಕೈಗೊಂಡಿಲ್ಲ ಎಂದು ದೂರಿದರು.

ಮೇಕೆದಾಟು ಪರಿಹಾರವೇ?

ಕಾವೇರಿ ಪ್ರಾಧಿಕಾರದ ಅಧಿಕಾರಿಗಳು ಹೋದ ಸಂದರ್ಭದಲ್ಲಿ ತಮಿಳುನಾಡಿನ ಅಧಿಕಾರಿಗಳು ಬಾಯ್ಕಟ್ ಮಾಡ್ತಾರೆ. ನೀರಾವರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಟ್ಟಿಲ್ಲ. 1.8 ಹೆಕ್ಟೆರ್ ಮಾತ್ರ ತಮಿಳುನಾಡಿನವರು ಬೆಳೆ ಬೆಳೆಯಬೇಕು. ಆದ್ರೆ, 3 ಹೆಕ್ಟೆರ್ ಹೆಚ್ಚು ಬೆಳೆ ಬೆಳೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ಗೆ ಕಾವೇರಿ ವಾಟರ್ ಮ್ಯಾನೆಜ್‌ಮೆಂಟ್‌ ಅವರು ಒಂದು ಅಫಿಡಿವಿಟ್ ಸಲ್ಲಿಕೆ ಮಾಡಿದ್ದಾರೆ. ಮೇಕೆದಾಟು ಯೋಜನೆ ಮಾತ್ರ ಇದಕ್ಕೆ ಪರಿಹಾರ ಅಂತಾರೆ ಎಂದು ಹೇಳಿದರು.

ರೈತರ ಬಗ್ಗೆ ಕಾಳಜಿ ಇಲ್ಲ

ರಾಜ್ಯ ಸರ್ಕಾರಕ್ಕೆ ಬೇಜವಬ್ದಾರಿ ಇದೆ. ಸರ್ಕಾರಕ್ಕೆ ಮಂಡ್ಯ ಜನರ ಮೇಲೆ ಕಾಳಜಿ ಇಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹಾದಾಯಿ ಪರವಾಗಿ ಅರ್ಜಿ ಹಾಕಿ ಅಂತಿದ್ದಾರೆ ಹಾಕ್ತಿಲ್ಲ. ಇವರು ಬರಿ ಸಭೆ ಮಾಡ್ಕೊಂಡಿದ್ದಾರೆ. ರೈತರ ಬಗ್ಗೆ ಡಿ.ಕೆ ಶಿವಕುಮಾರ್ ಅವರಿಗೆ ಕಾಳಜಿ ಇಲ್ಲ ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES