Monday, December 23, 2024

ಎರಡು ಕಾರುಗಳ ಮಧ್ಯೆ ಡಿಕ್ಕಿ ; ಇಬ್ಬರ ಸಾವು

ಶಿವಮೊಗ್ಗ : ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಸೊಸೆ ಮತ್ತು ಮಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಳೆಹೊನ್ನೂರು ಬಳಿ ಇರುವ ಜಾವಳ್ಳಿ ಬಳಿ ನಡೆದಿದೆ.

ಜಿಲ್ಲೆಯ ಇಲಿಯಾಸ್ ನಗರದ ನಿವಾಸಿಯಾಗಿರುವ ಆಪ್ತಾಬ್ ಬಾಷಾ (40) ಹಾಗೂ ಅವರ ತಂಗಿ ಮಗಳು ಮದಿಯಾ ಮಿನಲ್ (12) ಮೃತ ದುರ್ದೈವಿಗಳು. ಎಂಬ ಇಬ್ಬರು ಶಿವಮೊಗ್ಗದಿಂದ ಚೆನ್ನಗಿರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹೊಳೆಹೊನ್ನೂರು ಕಡೆಯಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ, ಇನ್ನೊಂದು ಕಾರಿಗೆ ರಭಸವಾಗಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಇದನ್ನು ಓದಿ : ಡಿಕೆಶಿ ನೀರಾವರಿ ಮಂತ್ರಿನಾ? : ಅಶ್ವತ್ಥನಾರಾಯಣ

ಕಾರು ಡಿಕ್ಕಿ ಹೊಡೆದ ಪರಿಣಾಮ ಆಪ್ತಾಬ್ ಬಾಷಾ ಮತ್ತು ಮಿನಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಇನ್ನೊಂದು ಕಾರಿನಲ್ಲಿದ್ದ ಬೆಂಗಳೂರು ಮೂಲದ ನಾಗರಾಜ್, ಸುಬ್ರಮಣ್ಯ ಹಾಗೂ ಅನಿರುದ್ಧ ಎಂಬುವರಿಗೆ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರ ಶವಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಶವಗಾರದ ಬಳಿ ಮೃತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನಾ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES