ರಾಯಚೂರು : ರಾಯರ ಆರಾಧನೆಯಲ್ಲಿ ಭಾಗಿಯಾದ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ರವರು ಚಂದ್ರಯಾನ ಸಕ್ಸಸ್ ಬಗ್ಗೆ ಮಾತನಾಡಿದರು.
ಮಂತ್ರಾಲಯದ ರಾಯರ ದರ್ಶನ ಪಡೆಯಲು ಬಂದಿದ್ದ ಜಗ್ಗೇಶ್ರವರು ರಾಯರ ಆರಾಧನೆಯಲ್ಲಿ ಭಾಗವಹಿಸಿ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು. ಪ್ರತಿಭಾರಿ ಬಂದಾಗ ನಮಗೆ ಮಠದ ಕೃಪೆ ಯಾವಾಗಲೂ ಆಗುತ್ತೆ. ಅಷ್ಟೇ ಅಲ್ಲದೆ ನಾವು ರಥೋತ್ಸವದಲ್ಲಿ ಭಾಗಿಯಾಗಿ, ಧ್ಯಾನ ಸಹ ಮಾಡುತ್ತೇನೆ. ಅದೇ ರೀತಿ ಇಂದು ಸಹ ರಾಯರ ಆರಾಧನೆಗೆ ಭಾಗಿಯಾಗಲು ಬಂದಿದ್ದನೆ.
ಇದನ್ನು ಓದಿ : ಸೋನಿಯಾ ಗಾಂಧಿಗೆ ಬೈದಿದ್ರಿ, ಈಗ ಯಾರ ಕಾಲ ಕೆಳಗೆ ಇದ್ದಿರಾ? : ಸಿದ್ದರಾಮಯ್ಯ ವಿರುದ್ಧ ಜಿ.ಟಿ…
ಇಂದು ಬಹಳ ವಿಶೇಷವಾದ ದಿನ ಈ ದಿನದೊಂದು ನಾನು ಎಷ್ಟೇ ಕೆಲಸವಿದ್ರ ಈ ದಿನ ಪ್ರತಿಭಾರಿ ವಿರಾಮ ತೆಗೆದುಕೊಳ್ಳುತ್ತೇನೆ. ಇಲ್ಲಿಗೆ ಬರುವುದು ಒಂದು ರೀತಿ ಬ್ಯಾಂಕ್ ಬ್ಯಾಲೆನ್ಸ್ನ ಸಂತೋಷದ ಥರ, ಆದ್ದರಿಂದ ರಾಯರು ವಿಶೇಷವಾಗಿ ಆರ್ಶಿವಾದ ಮಾಡ್ತಾರೆ ಎಂದ ನಟ ಜಗ್ಗೇಶ್.
ಬಳಿಕ ಮತ್ತೇ ಮಾತನಾಡಿದ ಜಗ್ಗೇಶ್ರವರು ಇಡೀ ವಿಶ್ವದಲ್ಲೇ ಯಾರೂ ಮಾಡದ ಸಾಧನೆಯನ್ನು, ನಮ್ಮ ವಿಜ್ಞಾನಿಗಳು ಚಂದ್ರಯಾನ 3 ಸಕ್ಸಸ್ ಮಾಡಿದ್ದಾರೆ. ಹೇಳಬೇಕು ಅಂದರೆ ದೇವರಿಗಿಂತ ಈ ನಮ್ಮ ವಿಜ್ಞಾನಿಗಳಿಗೆ ಎದ್ದುನಿಂತು ಚಪ್ಪಾಳೆ ಹೊಡಿಯಬೇಕು. ಚಂದ್ರಯಾನ 2 ಫೇಲ್ ಆದ ವೇಳೆ ನರೇಂದ್ರ ಮೋದಿ ಅವರ ವರ್ತನೆ ಮೆಚ್ಚಬೇಕು.
ಒಬ್ಬ ತಂದೆ ಮಕ್ಕಳು ಫೇಲ್ ಆದಾಗ, ಹೇಗೆ ಹುರುದುಂಬಿಸಿ ಮತ್ತೆ ಪುಟಿದೇಳುವಂತೆ ಮಾಡ್ತಾನೋ ಅದೇ ರೀತಿ ಮೋದಿಜಿ ಮಾಡಿದ್ದಾರೆ. ಅದರಿಂದ ಈ ಭಾರಿ ಚಂದ್ರಯಾನ 3 ಸಕ್ಸಸ್ ಕಂಡು ಮೋದಿ ಅವರಿಗೆ ಇದು ಭಾವುಕವಾದ ಕ್ಷಣವಾಗಿದ್ದು, ಈ ಕಾಲವನ್ನು ಮೋದಿಜಿ ಅವರು ಅಮೃತ ಕಾಲ ಎಂದು ಕರೆದಿದ್ದಾರೆ. ಎಂದು ಮೋದಿ ಅವರನ್ನು ಆಡಿ ಹೋಗಳಿದ ನಟ ಜಗ್ಗೇಶ್.