Wednesday, January 22, 2025

ಸಾರ್ವಜನಿಕರಿಗೆ ಲಾಲ್​ಬಾಗ್ ಪ್ರವೇಶವಿಲ್ಲ

ಬೆಂಗಳೂರು : ಇಂದು ಸಸ್ಯಕಾಶಿ ಲಾಲ್​ಬಾಗ್​ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸಸ್ಯಕಾಶಿಗೆ G-20 ಶೃಂಗಸಭೆ ಗಣ್ಯರು ಭೇಟಿ ನೀಡುತ್ತಿದ್ದಾರೆ. ಸಸ್ಯಕಾಶಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಗಣ್ಯರು ಭೇಟಿ ನೀಡುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ವರೆಗೆ ಪ್ರವೇಶ ನಿಷೇಧಿಸಿದ್ದು, ಸಾರ್ವಜನಿಕರು, ಪ್ರವಾಸಿಗರು ಹಾಗೂ ವಾಯು ವಿಹಾರಗಳು ಸೇರಿದಂತೆ ಎಲ್ಲರಿಗೂ ಪ್ರವೇಶಕ್ಕೆ ಅವಕಾಶವಿಲ್ಲ. ಈ ಬಗ್ಗೆ ಲಾಲ್​ಬಾಗ್​ ತೋಟಗಾರಿಕಾ ಇಲಾಖೆ ಮಾಹಿತಿ ನೀಡಿದೆ.

RELATED ARTICLES

Related Articles

TRENDING ARTICLES