Wednesday, January 22, 2025

ಸಿದ್ದಲಿಂಗಯ್ಯರನ್ನ ರಾಷ್ಟ್ರಕವಿ ಅಂತ ಘೋಷಣೆ ಮಾಡಬೇಕು : ಹೆಚ್. ಆಂಜನೇಯ

ಬೆಂಗಳೂರು : ಕವಿ ಸಿದ್ದಲಿಂಗಯ್ಯ ಅವರನ್ನು ರಾಷ್ಟ್ರಕವಿ ಅಂತ ಘೋಷಣೆ ಮಾಡಬೇಕಿತ್ತು. ಆದರೆ, ಸರ್ಕಾರಗಳು ಇದನ್ನು ಮಾಡುವ ಕೆಲಸ ಮಾಡಿಲ್ಲ. ಆದರೂ, ನಮಗೆ ಅವರು ರಾಷ್ಟ್ರ ಕವಿಯೇ ಎಂದು ಮಾಜಿ ಸಚಿವ ಹೆಚ್​. ಆಂಜನೇಯ ಹೇಳಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದಲಿಂಗಯ್ಯ ಅವರನ್ನು ಅಣ್ಣ.. ಅಣ್ಣ ಅಂತೆ ಕರೆಯುತ್ತಿದೆ. 70ರ ದಶಕದಲ್ಲಿ ಸಿದ್ದಲಿಂಗಯ್ಯ ಅವರು ಇಂದಿರಾಗಾಂಧಿ ವಿರುದ್ಧ ಬರೆಯುತ್ತಿದ್ದರು. ಇದಕ್ಕೆ ನನಗೆ ವಿರೋಧ ಇತ್ತು. ಆಗ ಅವರನ್ನು ಕಂಡರೆ ಕೋಪ ಬರುತ್ತಿತ್ತು. ಆದರೆ, ನಮ್ಮವರು ಅವರು ಅಂತ ಅವರು ಏನೇ ಮಾತಾಡಿದ್ರು ಹೊಟ್ಟೆಗೆ ಹಾಕಿಕೊಳ್ತಿದ್ದೆ. ಆದರೆ, ಬರುತ್ತಾ ಸಿದ್ದಲಿಂಗಯ್ಯ ಅವರಿಗೆ ಸತ್ಯ ಅರಿವಾಯಿತು ಎಂದು ತಿಳಿಸಿದರು.

ಮೋದಿ ವಿರೋಧಿಗಳು ವೋಟು ಹಾಕಿದ್ರು

ಈ ವರ್ಷ ನಡೆದ ಚುನಾವಣೆಯಲ್ಲಿ ಮೋದಿ ವಿರೋಧ ಇರೋರೆಲ್ಲ ಕಾಂಗ್ರೆಸ್​ಗೆ ಮತ ಹಾಕಿದ್ರು. ಸಿದ್ದರಾಮಯ್ಯ ಅವರು ಸಿಎಂ ಆಗ್ತಾರೆ ಅಂತ ದಲಿತ ಸಮುದಾಯಗಳು ಸಂಪೂರ್ಣವಾಗಿ ಮತ ಹಾಕಿದ್ವಿ. ಮಾದಿಗರು ಹೆಚ್ಚು ಹಿಂದೆ ಉಳಿದ್ದಿದ್ದಾರೆ. ನಮಗೆ ಬರಬೇಕಾದ ಪಾಲು‌ ಕೊಡಿ ಅಂತ ಕೇಳುತ್ತಿದ್ದೇವೆ ಅಷ್ಟೆ. ನಮಗೆ ಬಲ ಸಮುದಾಯದ ಜೊತೆ ಜಗಳ ಇಲ್ಲ. ಆದರೆ, ನಮಗೆ ಬರಬೇಕಾದ ಪಾಲು ಕೊಡಬೇಕು ಅಷ್ಟೆ ಎಂದು ಹೇಳಿದರು.

ಇದನ್ನೂ ಓದಿ : ಹೊಲೆಯ, ಮಾದಿಗ ಅಂತ ನಾವೇ ಕರೆದುಕೊಳ್ತೀವಿ : ಸಚಿವ ಮಹದೇವಪ್ಪ

ಹಾಸ್ಟೆಲ್​ಗಳು ಫೈವ್ ಸ್ಟಾರ್ ಹೊಟೇಲ್ ಆಗಿದ್ದವು

ಕಲಾಗ್ರಾಮದಲ್ಲಿ ಸಿದ್ದಲಿಂಗಯ್ಯ ಅವರ ಸಮಾಧಿಯನ್ನು ಸ್ಮಾರಕವಾಗಿ ನಿರ್ಮಾಣ ಮಾಡಬೇಕು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಿದ್ದಲಿಂಗಯ್ಯ ಅಧ್ಯಯನ ಪೀಠಕ್ಕೆ ಆರ್ಥಿಕ ಸಹಕಾರ ನೀಡಬೇಕು. ನಾನು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹಾಸ್ಟೆಲ್​ಗಳನ್ನು ಫೈವ್ ಸ್ಟಾರ್ ಹೊಟೇಲ್ ರೀತಿ ಮಾಡಿದ್ದೆ. ನಾನು ಇದ್ದಾಗ ಹೋಬಳಿ ಶಾಲೆ ಪ್ರಾರಂಭ ಮಾಡಿದ್ವಿ. ಹೋಬಳಿ ಶಾಲೆಗಳಲ್ಲಿ ಹೋಬಳಿ ಅವರೇ ದಾಖಲಾಗಬೇಕು.‌ಇದಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಂಜನೇಯ ಒತ್ತಾಯಿಸಿದರು.

RELATED ARTICLES

Related Articles

TRENDING ARTICLES