Sunday, December 22, 2024

ಬಡವ್ರು ಮಕ್ಕಳು ಬೇಳಿಬೇಕು ಕಣ್ರಯ್ಯಾ : ಪ್ರದೀಪ್ ಈಶ್ವರ್ ಪಂಚಿಂಗ್ ಡೈಲಾಗ್!

ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷದ ಯುವ ಸಂವಾದ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತೆ ಪಂಚಿಂಗ್ ಡೈಲಾಗ್ ಹರಿಬಿಟ್ಟಿದ್ದಾರೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಡವರ ಮಕ್ಕಳು ಬೇಳಿಬೇಕು ಕಣ್ರಯ್ಯಾ! ಚಿಕ್ಕಬಳ್ಳಾಪುರ ಎಂಎಲ್ಎ ನಿಮ್ಮಣ್ಣ ಕಣ್ರೋ! ಎಂದು ಸಿನಿಮಾ ಡೈಲಾಗ್ ಹೊಡೆದಿದ್ದಾರೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಅಕ್ಕ ತಂಗಿಯರು, ತಾಯಂದಿರಿಗೆ ಸೀರೆ ಕೊಟ್ಟಿದ್ದೇನೆ. ಗಣೇಶನ ಹಬ್ಬಕ್ಕೆ ಅಣ್ಣ ತಮ್ಮಂದಿರೂ ಬಟ್ಟೆ ವಿತರಣೆ ಮಾಡಲಾಗುತ್ತೆ. ಸರ್ಕಾರಿ ಶಾಲೆಗಳ ಫಲಿತಾಂಶ 100ಕ್ಕೆ 100 ತರೋ ಗುರಿ ನಂದು. ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕು ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆ ನಂಗೆ ದೇವಾಲಯ

ಚಿಕ್ಕಬಳ್ಳಾಪುರ ಸರ್ಕಾರಿ ಶಾಲೆಗಳ ಫಲಿತಾಂಶ ನೋಡಿ ರಾಜ್ಯದ ಇತರೆ ಭಾಗದ ಮಕ್ಕಳು ಇಲ್ಲಿ ಸೇರೋ ತರ ಇರಬೇಕು. ಸರ್ಕಾರಿ ಶಾಲೆಗಳ ಆವರಣದಲ್ಲಿ ಪುಂಡರ ಹಾವಳಿ ತಪ್ಪಿದೆ. ಸರ್ಕಾರಿ ಶಾಲೆ ಆವರಣ ನಂಗೆ ದೇವಾಲಯ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡೋ ಕೆಲಸ ನಂದು ಎಂದು ತಿಳಿಸಿದ್ದಾರೆ.

ತಾಯಿ ಜನ್ಮದಿನಕ್ಕೆ 5 ಆಂಬುಲೆನ್ಸ್

ಸೆಪ್ಟಂಬರ್ 12ರಂದು ದಿವಂಗತ ನನ್ನ ತಾಯಿಯ ಜನ್ಮದಿನ. ಅದರ ಅಂಗವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ  5 ಆಂಬುಲೆನ್ಸ್ ಕೊಡುಗೆ ನೀಡುವುದಾಗಿ ಹೇಳಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಮಾತಿಗೆ ವಿದ್ಯಾರ್ಥಿಗಳು ಮೋಡಿಯಾಗಿದ್ದಾರೆ.

RELATED ARTICLES

Related Articles

TRENDING ARTICLES