Monday, December 23, 2024

ಆರ್ಥಿಕ ಸಂಕಷ್ಟದಲ್ಲಿ ಹಂಪಿ ವಿವಿ: ಹಣ ಬಿಡುಗಡೆ ಮಾಡುವಂತೆ ಸಂಘಟನೆಗಳ ಒತ್ತಾಯ!

ಬಳ್ಳಾರಿ : ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅರ್ಥಿಕ ಮುಗ್ಗಟ್ಟು ಉಂಟಾಗಿದ್ದು ಕೂಡಲೇ ರಾಜ್ಯ ಸರ್ಕಾರ ಕನ್ನಡ ವಿವಿಗೆ ಹಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಒತ್ತಾಯ ಮಾಡಿದರು.

ನಗರದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಪ್ರಮುಖವಾಗಿ ಅಧ್ಯಾಪಕರ ಸಂಬಳ ಕೊಡದೇ ವಿಳಂಬ ಸೇರಿದಂತೆ ವಿದ್ಯುತ್ ಬಿಲ್​ ಪಾವತಿಗೂ ಹಣವಿಲ್ಲದ ಪರಿಸ್ಥತಿ ನಿರ್ಮಾಣವಾಗಿದೆ ಈ ಕೂಡಲೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಹಂಪಿ ಕನ್ನಡ ವಿವಿಯು ಕರ್ನಾಟಕದ ಆಸ್ಮಿತೆ, ವಿವಿಯನ್ನು ಅರ್ಥಿಕ ಸಬಲಿಕರಣ ಮಾಡಬೇಕಿದೆ.

ಇದನ್ನೂ ಓದಿ: ಮೈಸೂರು ಪಾಲಿಕೆ ಚುನಾವಣೆ: “ಕೈ” ವಶವಾಗುವಂತೆ ಕೆಲಸ ಮಾಡಿ- ಸಿಎಂ

ವಿಶ್ವವಿದ್ಯಾಲಯದ ಆರ್ಥಿಕ ಮುಗ್ಗಟ್ಟು ಸರಿದೂಗಿಸದಿದ್ದಲ್ಲಿ ರಾಜ್ಯದ ಮನೆ ಮನೆಗೂ ತೆರಳಿ ನಮ್ಮ ಸಂಘಟನೆ ವತಿಯಿಂದ ಒಂದೊಂದು ರೂಪಾಯಿ ಭಿಕ್ಷೆ ಬೇಡಿ  ಹಣ ಒದಗಿಸ್ತೇವೆ. ಈ ಮೂಲಕ ಸರ್ಕಾರಕ್ಕೆ ಮುಖಭಂಗವಾಗಲಿದೆ, ಹಾಗಾದರೂ ಸರ್ಕಾರ ಎಚ್ಚುತ್ತುಕೊಳ್ತಾ ನೋಡೋಣ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕನ್ನಡರಾಮಯ್ಯ ಅಂತ ರಾಜ್ಯದ ಜನರು ಕರೆಯುತ್ತಾರೆ. ಕನ್ನಡರಾಮಯ್ಯ ಅಂತ ಹೆಸರು ಉಳಿಸಿಕೊಳ್ಳಲು ಕೂಡಲೇ ಹಂಪಿ ವಿವಿಗೆ ಹಣ ಬಿಡುಗಡೆ ಮಾಡ್ಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಗಳಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES