Wednesday, January 22, 2025

2047ರಲ್ಲಿ ಭಾರತದ ನಿರ್ಣಯಕ್ಕೆ ವಿಶ್ವವೇ ತಲೆಬಾಗಲಿದೆ : ಮೋದಿ ‘ಗ್ಯಾರಂಟಿ’

ನವದೆಹಲಿ : 2047ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿರುವ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವಾಸಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಇದು ಆತ್ಮವಿಶ್ವಾಸದೊಂದಿಗೆ ತುಂಬಿರುವ ನವ ಭಾರತ. ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ಸಾಗಬೇಕಾದ ಅಗತ್ಯವಿದೆ. ದೇಶದ ಎಲ್ಲ ಜನರು ಭಾರತದ ಏಕತೆಯ ಮಂತ್ರ ಜಪಿಸುತ್ತಾ ಹೆಜ್ಜೆ ಹಾಕಬೇಕಿದೆ. ಭಾರತದ ರಫ್ತು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಭಾರತದ ರಫ್ತಿನ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಜಾಗತಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಇದನ್ನೂ ಓದಿ : ರಾಷ್ಟ್ರಧ್ವಜ ಗೌರವ.. ಧ್ವಜ ಹಾರಿಸುವಾಗ.. ಈ ಮುನ್ನೆಚ್ಚರಿಕೆ ಅಗತ್ಯ

ಟಾಪ್-3 ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತ

ಆರ್ಥಿಕತೆಯನ್ನು ಬಲಪಡಿಸುವುದು, ಜನರನ್ನು ಸಬಲೀಕರಣಗೊಳಿಸುವುದು ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಮುಂದಿನ 5 ವರ್ಷಗಳಲ್ಲಿ ಭಾರತವನ್ನು ವಿಶ್ವದ ಟಾಪ್-3 ಆರ್ಥಿಕತೆಗಳ ಪಟ್ಟಿಯಲ್ಲಿರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸುವರ್ಣ ಇತಿಹಾಸ ಬರೆಯಲಿದೆ

ನಾವು ಏನೇ ಮಾಡಿದರೂ, ನಾವು ಯಾವುದೇ ಹೆಜ್ಜೆ ಇಟ್ಟರೂ, ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಮುಂದಿನ ಒಂದು ಸಾವಿರ ವರ್ಷಗಳವರೆಗೆ ನಮ್ಮ ಗುರಿಯನ್ನು ನಿರ್ಧರಿಸುವುದಾಗಿರುತ್ತದೆ. ಅದು ಭಾರತದ ಭವಿಷ್ಯ, ಸುವರ್ಣ ಇತಿಹಾಸವನ್ನು ಬರೆಯಲಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES