Friday, May 10, 2024

ರಾಷ್ಟ್ರಧ್ವಜ ಗೌರವ.. ಧ್ವಜ ಹಾರಿಸುವಾಗ.. ಈ ಮುನ್ನೆಚ್ಚರಿಕೆ ಅಗತ್ಯ

ಬೆಂಗಳೂರು : ರಾಷ್ಟ್ರಧ್ವಜ ಅಥವಾ ತ್ರಿವರ್ಣ ಧ್ವಜ ನಮ್ಮ ಹೆಮ್ಮೆಯ ಸಂಕೇತ. ಇದು ನಮ್ಮ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ. ದೇಶದ ಪ್ರಧಾನ ಮಂತ್ರಿಗಳು ಪ್ರತಿ ವರ್ಷ ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿದಾಗ ನಾನು ‘ಭಾರತೀಯ’ ಎಂಬ ಭಾವನೆ ಮೂಡುತ್ತದೆ.

ಆಗಸ್ಟ್​ 15 ಸ್ವಾತಂತ್ರ್ಯ ದಿನಾಚಾರಣೆ. ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಕಡ್ಡಾಯ. ಹೀಗಾಗಿ, ರಾಷ್ಟ್ರಧ್ವಜ ಸಂಹಿತೆ ಜಾರಿಗೊಳಿಸಲಾಗಿದೆ. ಹಾಗಿದ್ರೆ, ರಾಷ್ಟ್ರಧ್ವಜ ಗೌರವಕ್ಕೆ ನಾವು ಯಾವ ಮುನ್ನೆಚ್ಚರಿಕೆ ಅನುಸರಿಸಬೇಕು? ಇಲ್ಲಿದೆ ನೋಡಿ ಮಾಹಿತಿ.

  • ಧ್ವಜಾರೋಹಣ ಮಾಡುವಾಗ ಮೇಲೆ ಕೇಸರಿ ಬಣ್ಣ ಬರುವಂತೆ ನೋಡಿಕೊಳ್ಳಬೇಕು.
  • ಪ್ರತಿ ಧ್ವಜವು 3:2 ಅಳತೆಯ ಅನುಪಾತವನ್ನು ಹೊಂದಿರಬೇಕು.
  • ಕೇಸರಿ-ಬಿಳಿ-ಹಸಿರು ಬಣ್ಣಗಳ ನಡುವೆ 24 ಗೆರೆಗಳನ್ನು ಹೊಂದಿದ ಅಶೋಕ ಚಕ್ರವಿರಬೇಕು.
  • ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ನೇತು ಹಾಕಬಾರದು.
  • ಧ್ವಜದ ಮೇಲೆ ಏನನ್ನೂ ಬರೆಯಬಾರದು.
  • ವಸ್ತುಗಳು, ಕಟ್ಟಡಗಳು ಇತ್ಯಾದಿಗಳನ್ನು ಮುಚ್ಚಲು ರಾಷ್ಟ್ರಧ್ವಜವನ್ನು ಬಳಸಬಾರದು.
  • ಧ್ವಜವನ್ನು ಕಂಬದ ತುದಿಯಲ್ಲಿ ಹಾರಿಸಬೇಕು.
  • ಧ್ವಜವನ್ನು ಕೆಳಗೆ ಬೀಳದಂತೆ ಎಚ್ಚರಿಕೆ ವಹಿಸಬೇಕು.
  • ಧ್ವಜ ಹಾರಿಸುವಾಗ ವೇಗವಾಗಿ ಹಾಗೂ ಇಳಿಸುವಾಗ ನಿಧಾನದ ಕ್ರಮಗಳನ್ನು ಅನುಸರಿಸಬೇಕು.
  • ಧ್ವಜ ಸಂಹಿತೆ ಉಲ್ಲಂಘನೆಗೆ 3 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.

RELATED ARTICLES

Related Articles

TRENDING ARTICLES