Monday, December 23, 2024

ಮೈಸೂರು ದಸರಾ 2023: ವಿಶ್ವ ವಿಖ್ಯಾತ ಜಂಬೂಸವಾರಿಗೆ ಗಜಪಡೆಗಳ ಆಯ್ಕೆ ಅಂತಿಮ

ಮೈಸೂರು : ವಿಶ್ಯಾವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಆರಂಭವಾಗಿದ್ದು, ಮೊದಲನೇ ಹಂತದಲ್ಲಿ ಬರುವ 9 ಗಜಪಡೆಗಳ ಪಟ್ಟಿ ಅಂತಿಮಗೊಳಿಸಿದ ಅಧಿಕಾರಿಗಳು.  

ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆಗಾಗಿ ನಿನ್ನೆ ಸಭೆ ನಡೆದಿದ್ದು, ಮೊದಲ ಹಂತದಲ್ಲಿ ವೀರನಹೊಸಹಳ್ಳಿ, ಬಂಡೀಪುರ ವಿವಿಧ ಆನೆ ಕ್ಯಾಂಪ್​ಗಳಿಗೆ ತೆರಳಿ ಅಧಿಕಾರಿಗಳು ಆನೆಗಳ ಪರಿಶೀಲನೆಯನ್ನು ನಡೆಸಿ 9 ಗಜಪಡೆಗಳನ್ನು ಆಯ್ಕೆಮಾಡಿರುವ ಅರಣ್ಯಧಿಕಾರಿಗಳು.

ಇದನ್ನು ಓದಿ : ಮಲ್ಲೇಶ್ವರ ನಿವಾಸದತ್ತ ಸ್ಪಂದನಾ ಪಾರ್ಥಿವ ಶರೀರ

ಸದ್ಯ ಸೆಪ್ಟೆಂಬರ್ 1ರ ಜಂಬೂಸವಾರಿಗೆ ನಾಗರಹೊಳೆ ಆನೆ ಶಿಬಿರದಿಂದ ಅಭಿಮನ್ಯು, ಭೀಮ, ಮಹೇಂದ್ರ ಆನೆಗಳು ಹಾಗೂ ನಾಗರಹೊಳೆ ಬಳ್ಳೆ ಆನೆ ಶಿಬಿರದಿಂದ ಅರ್ಜುನ, ದುಬಾರೆ ಆನೆ ಶಿಬಿರದಿಂದ ಧನಂಜಯ ಮತ್ತು ಗೋಪಿ ಆನೆಗಳು.

ಅಷ್ಟೇ ಅಲ್ಲದೆ ಬಂಡೀಪುರದ ರಾಮಪುರ ಶಿಬಿರದಿಂದ ಪಾರ್ಥ ಸಾರಥಿ, ದುಬಾರಿ ಆನೆ ಶಿಬಿರದಿಂದ ವಿಜಯ, ಭೀಮನಕಟ್ಟೆ ಶಿಬಿರದಿಂದ ವರಲಕ್ಷೀ ಆನೆಗಳು ಗಜಪಯಣದಲ್ಲಿ ಅರಮನೆಗೆ ಆಗಮಿಸಲಿರುವ ಗಜಪಡೆಗಳು.

ಮೊದಲನೇ ಸಭೆಯಲ್ಲಿ ಆನೆಗಳ ಪಟ್ಟಿ ಅಂತಿಮವಾಗಿದ್ದು, ಮತ್ತೊಂದು ಸಭೆ ನಡೆಸಿ ದಸರ ಮಹೋತ್ಸವ ಮೆರಗುಗೊಳಿಸಲು ಎರಡನೇ ಪಟ್ಟಿ ತಯಾರು ಮಾಡಲಿರುವ ಅಧಿಕಾರಿಗಳು.

RELATED ARTICLES

Related Articles

TRENDING ARTICLES