ಹಾಸನ : ನಿನ್ನೆ (ಆಗಸ್ಟ್ 8) ರಾತ್ರಿ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಆದರೆ ಈ ಸಮಯದಲ್ಲಿ ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್ ಸಿಗದ ಕಾರಣಕ್ಕೆ 9 ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಆಗಸ್ಟ್ 15ಕ್ಕೆ ಆಶಾ ಎಂಬುವವರಿಗೆ ವೈದ್ಯರು ಡೆಲಿವರಿ ಡೇಟ್ ಕೊಟ್ಟಿದ್ದರು. ಆದರೆ, ಕಳೆದ ರಾತ್ರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಆಶಾಳನ್ನು ಕಂಡು ಪೋಷಕರಿಗೆ ಏನು ಮಾಡುವುದು ಎಂಬುದು ತಿಳಿಯದೇ 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ.
ಇದನ್ನು ಓದಿ : ವಿಜಯ್ ರಾಘವೇಂದ್ರರನ್ನು ಬಿಗಿದಪ್ಪಿ ಸಾಂತ್ವನ ಹೇಳಿದ ನಟ ಯಶ್!
ಆ್ಯಂಬುಲೆನ್ಸ್ ಸಿಬ್ಬಂದಿ ಪೋನ್ ರಿಸೀವ್ ಮಾಡಿಲ್ಲ ಹೀಗಾಗಿ ಗರ್ಭಿಣಿ ಮಹಿಳೆ ಸಹೋದರ ಸಮಯ ಕೈ ಮೀರುವ ಮುನ್ನ ಖಾಸಗಿ ವಾಹನದಲ್ಲಿ ತಂಗಿಯನ್ನ ಕರೆದುಕೊಂಡು ಬೇಲೂರಿನ ತಾಲೂಕು ಆಸ್ಪತ್ರೆಗೆ ಕರೆದುಕೊಂಡಿದ್ದಾರೆ.
ದುರಾದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲಿ ಕಣ್ಣು ಬಿಡುವ ಮುಂಚೆಯೇ ತಾಯಿಯ ಹೊಟ್ಟೆಯೊಳಗೆ 9 ತಿಂಗಳ ಹಸುಗೂಸು ಅಸುನೀಗಿದೆ. ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಸಿಕ್ಕದ್ದರೆ ಎಳೆಕಂದನ್ನು ಉಳಿಸಿಕೊಳ್ಳಬಹುದಿತ್ತು. 108ನವರ ಬೇಜವಾಬ್ದಾರಿತನದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಗ್ಯ ಇಲಾಖೆ ವಿರುದ್ಧ ಆರೋಪ ಮಾಡಿದ ಮಹಿಳೆ ಕುಟುಂಬದ ಸದಸ್ಯರು.