Sunday, December 22, 2024

ತಡರಾತ್ರಿ ಮತ್ತೆ ವಿದೇಶಕ್ಕೆ ತೆರಳಿದ ಹೆಚ್​.ಡಿ ಕುಮಾರಸ್ವಾಮಿ!

ಬೆಂಗಳೂರು: ಕಳೆದ ವಾರವಷ್ಟೆ ವಿದೇಶದಿಂದ ಭಾರತಕ್ಕೆ ವಾಪಸ್​ ಆಗಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೋಮವಾರ ತಡರಾತ್ರಿ ಮತ್ತೆ ಮಲೇಷಿಯಾ ವಿಮಾನ ಹತ್ತಿರುವುದು ಭಾರಿ ಕುತೂಹಲ ಮೂಡಿಸಿದೆ.

ಇದನ್ನು ಓದಿ: ಬ್ಯಾಂಕ್​ ನೌಕರರಿಗೆ ವಾರದಲ್ಲಿ ಐದೇ ದಿನ ಕೆಲಸ!?

ಸೋಮವಾರ ರಾತ್ರಿ 12 ಗಂಟೆಗೆ ತಮ್ಮ ಆಪ್ತರೊಂದಿಗೆ ಮಲೇಷಿಯಾ ಪ್ರಯಾಣ ಬೆಳೆಸಿರುವ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, ಕಳೆದವಾರಷ್ಟೆ ತಮ್ಮ ಕುಟುಂಬ ಸಮೇತರಾಗಿ ಯೂರೋಪ್​ ಪ್ರವಾಸಕ್ಕೆ ತೆರಳಿ ವಿದೇಶದಿಂದ ವಾಪಾಸ್ಸಾಗಿದ್ದರು.

ಯೂರೋಪ್​ ಪ್ರವಾಸದಿಂದ ಮರಳಿದ ಒಂದು ವಾರದ ಒಳಗೆ ಮತ್ತೆ ತಮ್ಮ ಆಪ್ತರಾದ ಮಾಜಿ ಶಾಸಕ ಸಾ.ರಾ.ಮಹೇಶ್​, ರಮೇಶ್​​​ ಗೌಡ ಜೊತೆ ಮಲೇಷಿಯಾ ಪ್ರಯಾಣಕ್ಕೆ ತೆರಳಿದ್ದಾರೆ. ಈ ವಿದೇಶ ಪ್ರವಾಸದ ಕುರಿತು ಹಲವು ರಾಜಕೀಯ ಲೆಕ್ಕಾಚಾರಗಳ ಚರ್ಚೆಗಳು ಮೂಡುತ್ತಿದೆ.

RELATED ARTICLES

Related Articles

TRENDING ARTICLES