Saturday, May 18, 2024

ಬ್ಯಾಂಕ್​ ನೌಕರರಿಗೆ ವಾರದಲ್ಲಿ ಐದೇ ದಿನ ಕೆಲಸ!?

ಬೆಂಗಳೂರು: ವಾರದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಕೆಲಸ ನಿರ್ವಹಿಸಿ ತಿಂಗಳ ನಾಲ್ಕು ಶನಿವಾರಗಳನ್ನು ರಜೆಯನ್ನಾಗಿ ಘೊಷಿಸಬೇಕು ಎನ್ನುವ ಬ್ಯಾಂಕ್​ ನೌಕರರ ಪ್ರಸ್ತಾವಕ್ಕೆ ಇಂಡಿಯನ್​ ಬ್ಯಾಂಕರ್ಸ್​ ಅಸೋಸಿಯೇಷನ್​ (ಐಬಿಎ) ಒಪ್ಪಿಗೆ ನೀಡಿದೆ. ಈ ಸಂಬಂಧ ಶಿಫಾರಸ್ಸನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಿದೆ ಎಂದು ಮೂಲಗಳು ತಿಳಿಸಿದೆ.

ಇದನ್ನು ಓದಿ: ಡಯಟ್​​ ಮೊರೆ ಹೋಗಿದ್ದೆ ಸ್ಪಂದನಾ ಹೃದಯಾಘಾತಕ್ಕೆ ಕಾರಣವಾಯ್ತಾ!?

ಈಗಗಲೇ ಬ್ಯಾಂಕ್ ನೌಕರರಿಗೆ ಪ್ರತಿ ತಿಂಗಳ ಎರಡನೆಯ ಹಾಗೂ ನಾಲ್ಕನೆಯ ಶನಿವಾರ ರಜೆ ಇದೆ. ಈ ರಜೆಯನ್ನು ಎಲ್ಲ ಶನಿವಾರಗಳಿಗೂ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯನ್ನು ಬ್ಯಾಂಕಿಂಗ್ ವಲಯದ ವಿವಿಧ ಕಾರ್ಮಿಕ ಸಂಘಟನೆಗಳು ಇರಿಸಿದೆ. ಈ ಶಿಫಾರಸು ಜಾರಿಗೆ ಬಂದರೆ, ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್‌ ಶಾಖೆಗಳಲ್ಲಿ ಸೇವೆಗಳು ಲಭ್ಯವಾಗಲಿದೆ.

ಕಳೆದ ಜುಲೈ ತಿಂಗಳ ಕೊನೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಐಬಿಎ ಒಪ್ಪಿದ್ದು, ಅದನ್ನು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ಹಣಕಾಸು ಸಚಿವಾಲಯ, ಕೇಂದ್ರ ಕಾರ್ಮಿಕ ಸಚಿವಾಲಯ ಸೇರಿದಂತೆ ಕೆಲವು ಸಚಿವಾಲಯಗಳ ಸಮ್ಮತಿ ಸಿಗುವುದಷ್ಟೆ ಬಾಕಿ ಇದೆ ಎಂದು ಮೂಲಗಳು ಹೇಳಿವೆ.

RELATED ARTICLES

Related Articles

TRENDING ARTICLES