Sunday, January 19, 2025

ಕಾರು ಪಲ್ಟಿಯಾಗಿ ಹೆಡ್​ಕಾನ್ಸ್​ಟೇಬಲ್ ಸಾವು

ಕಲಬುರಗಿ : ಕಾರು ಪಲ್ಟಿಯಾಗಿ ಹೆಡ್​ಕಾನ್ಸ್​ಸ್ಟೇಬಲ್ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.

ಮೋಯಿಜುದ್ದೀನ್ (52) ಮೃತ ಹೆಡ್​ಕಾನ್ಸ್​ಟೇಬಲ್. ಇವರು ಕಲಬುರಗಿ ನಗರದ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮೃತ ಮೋಯಿಜುದ್ದೀನ್ ಅವರು ಕಲಬುರಗಿಯಿಂದ ಕಾರಿನಲ್ಲಿ ಮಳಖೇಡಕ್ಕೆ ಹೋಗುವಾಗ ಕಾರಿನ ಟೈರ್ ಬ್ಲಾಸ್ಟ್ ಆಗಿ, ಕಾರು ಪಲ್ಟಿಯಾಗಿದೆ. ಪರಿಣಾಮ, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಮೋಯಿಜುದ್ದೀನ್ ಅವರ ಸಹೋದರ ನಜುಮೊದ್ದೀನ್ ಹಾಗೂ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಘಟನೆ ಬಳಿಕ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಳಖೇಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES