Wednesday, January 22, 2025

ಕ್ಷುಲಕ ಕಾರಣಕ್ಕೆ ಮಗಳಿಂದಲೆ ಕೊಲೆಯಾದ ತಂದೆ

ರಾಮನಗರ : ಕ್ಷುಲಕ ಕಾರಣಕ್ಕೆ ಅಪ್ಪ ಮಗಳ ನಡುವೆ ಗಲಾಟೆ ತಂದೆಯನ್ನೇ ಕೊಲೆ ಮಾಡಿ ಪರಾರಿಯಾದ ಮಗಳು ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಈ ಘಟನೆ ನೆಡೆದಿದೆ.

ಕೆಲ ದಿನಗಳಿಂದ ಮಾನಸಿಕ ಆಸ್ಪತ್ರೆಗೆ ಒಳಗಾಗಿದ್ದ ಪುಷ್ಪ.

ಹೌದು, ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದ ಹುಚ್ಚೀರಯ್ಯ (68) ಮೃತವ್ಯಕ್ತಿ ಈತನ ಮಗಳಾದ ಪುಷ್ಪ ಎಂಬುವವಳು ಗಂಡನನ್ನು ಬಿಟ್ಟು ಬಂದು ಹಲವು ವರ್ಷಗಳಿಂದ ತಂದೆ ಮನೆಯಲ್ಲೇ ವಾಸವಾಗಿದ್ದಳು. ಪುಷ್ಪ ಕೆಲ ದಿನಗಳಿಂದ ಮಾನಸಿಕ ಆಸ್ಪತ್ರೆಗೆ ಒಳಗಾಗಿದ್ದರು, ಅದರಿಂದ ತಂದೆಯ ಜೊತೆ ಯಾವಗಲೂ ಜಗಳವಾಡುತ್ತಿದ್ದ ಪುಷ್ಪ.

ಇದನ್ನು ಓದಿ : ವನ್ಯಜೀವಿ ಭೇಟೆ ಆಡಿದ ಮೂವರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು

ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಕೊಲೆ ಮಾಡಿದ ಮಗಳು.

ಮಂಗಳವಾರ ರಾತ್ರಿ ಕ್ಷುಲಕ ಕಾರಣಕ್ಕೆ ಅಪ್ಪ ಮಗಳ ಮಧ್ಯೆ ಮಾತಿನ ಚಕಮಕಿಯಿಂದ ತುಂಬಾ ಜೋರಾಗಿ ಜಗಳ ನೆಡೆದಿದೆ, ಈ ವೇಳೆ ಪುಷ್ಪ ಗುದ್ದಲಿಯಿಂದ ಹುಚ್ಚೀರಯ್ಯ ನ ತಲೆಗೆ ಬಲವಾಗಿ ಹೊಡೆಯುತ್ತಾಳೆ, ಗುದ್ದಲಿಯಿಂದ ಬಲವಾಗಿ ಹೊಡೆದ ಕಾರಣ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿರೋ ತಂದೆ ಹುಚ್ಚೀರಯ್ಯ.

ಇದರ ಬೆನ್ನಲ್ಲೇ ತಾನು ಮಾಡಿದ ಕೃತ್ಯದಿಂದ ತಪ್ಪಿಸಿಕೊಳ್ಳಲು ಸದ್ಯ ಸ್ಥಳದಿಂದ ನಾಪತ್ತೆಯಾಗಿರುವ ಮಗಳು ಪುಷ್ಪ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡ ಚನ್ನಪಟ್ಟಣ ಗ್ರಾಮಾಂತರ ಪೋಲಿಸ್

RELATED ARTICLES

Related Articles

TRENDING ARTICLES