Sunday, May 12, 2024

ವನ್ಯಜೀವಿ ಭೇಟೆ ಆಡಿದ ಮೂವರು ಆರೋಪಿಗಳ ಬಂಧನ

ಉತ್ತರ ಕನ್ನಡ : ಜೊಯೀಡಾ ತಾಲೂಕಿನ ಫಣಸೋಲಿ ಅರಣ್ಯ ಪ್ರದೇಶದಲ್ಲಿ ಜಿಂಕೆಯ ಬೇಟೆಯಾಡುತ್ತಿದ್ದ ಹಿನ್ನೇಲೆ ಮೂವರನ್ನು ಬಂಧನ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು. 

ಹೌದು, ವನ್ಯಜೀವಿಗಳನ್ನು ಭೇಟೆಯಾಡುತ್ತಿರುವ ಆರೋಪಿಗಳು ಫಣಸೋಲಿ ಅರಣ್ಯ ವ್ಯಾಪ್ತಿಯ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ಕಂಡುಬಂದಿದೆ. ಜಿಂಕೆಯನ್ನು ಭೇಟೆಯಾಡಿ ಚರ್ಮ ಮತ್ತು ಮಾಂಸ ಬೇರ್ಪಡಿಸುತ್ತಿದ್ದರು. ಅದನ್ನು ಪತ್ತೆ ಹಚ್ಚಿ ಜಿಂಕೆಯನ್ನು ಭೇಟಿಯಾಡುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮೂವರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು.

ಜಿಂಕೆಗಳ ಚರ್ಮವನ್ನು ತೆಗೆದು ಅದನ್ನು ಮಾರಿಕೊಂಡು ಅದರಿಂದ ಬರುವ ಹಣ ಪಡೆಯಲು ಆರೋಪಿಗಳು ಪ್ಲಾನ ಮಾಡಿಕೊಂಡಿದ್ದರು. ಅದರಿಂದ ಜೊಯೀಡಾ ತಾಲೂಕಿನ ಅರಣ್ಯ ಪ್ರದೇಶದಲ್ಲಿ  ವನ್ಯ ಜೀವಿಗಳನ್ನು ಭೇಟೆಯಾಡಲು ಬಂದಿದ್ದ ವಿಷ್ಣು ಕಲ್ಮೋಕರ, ಕೇಶವ ಹರಿಜನಣ ಸುರೇಶ ಮುಂದಾಯಕರ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನು ಓದಿ : ಕಾಲು ಜಾರಿ ಹೇಮಾವತಿ ನದಿಗೆ ಬಿದ್ದು ವೃದ್ಧೆ ಸಾವು

ಜಿಂಕೆ ಬೇಟೆಯಾಡುತ್ತಿದ್ದ ಇನ್ನು ನಾಲ್ವರು ಪರಾರಿ.

ಅವರ ಜೊತೆಯಿದ್ದ ಕೃಷ್ಣ ಕಲ್ಮೋಲಕರ, ಮಂಜುನಾಥ ಕಲ್ಮೋಕರ, ಉಮಾಕಾಂತ ಧರಣಿ ಎಂಬುವವರು ನಾಪತ್ತೆಯಾಗಿದ್ದಾರೆ. ಜೊಯೀಡಾ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು, ನಾಪತ್ತೆಯಾದ ನಾಲ್ವರನ್ನು ಪತ್ತೆ ಹಚ್ಚುತ್ತಿರುವ ಜೊಯೀಡಾ ಅರಣ್ಯ ಇಲಾಖೆಯ ಅಧಿಕಾರಿಗಳು.

RELATED ARTICLES

Related Articles

TRENDING ARTICLES