Wednesday, January 22, 2025

ಬಂಧಿತರನ್ನು ಈಗಲೇ ಉಗ್ರರು ಅಂತಾ ಹೇಳಲು ಸಾಧ್ಯವಿಲ್ಲ : ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಶಂಕಿತ ಐವರು ಉಗ್ರರನ್ನು ಈಗಲೇ ಟೆರರಿಸ್ಟ್ ಅಂತಾ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದರು.

ವಿಧಾನಸೌಧದಲ್ಲಿ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಬಂಧಿತರನ್ನೂ ಟೆರರಿಸ್ಟ್ ಅಂತಾ ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಕುಸಿದು ಬಿದ್ದ ಶಾಸಕ ಯತ್ನಾಳ್

ವಿಚಾರಣೆ ಮಾಡಿ ಟೆರರ್​ ಲಿಂಕ್​​ ಇದೆಯಾ ಅಂತಾ ನೋಡುತ್ತಿದ್ದಾರೆ. ಕೇಂದ್ರ ಕಾರಾಗೃಹ ಕನೆಕ್ಷನ್ ಇಟ್ಟುಕೊಂಡಿರುವುದು ತಿಳಿದು ಬಂದಿದ್ದು, ಇನ್ನೂ ಕೆಲವು ಕೃತ್ಯವೆಸಗುವ ಬಗ್ಗೆ ಮಾಹಿತಿ ಸಿಕ್ಕಿದೆ.

ಪೊಲೀಸರ ತನಿಖೆ ಆಗಲಿ, ಆಮೇಲೆ NIA ತನಿಖೆ ಬಗ್ಗೆ ನೋಡೋಣ. ಸದ್ಯ ಬಂಧಿತರಿಂದ 7 ಕಂಟ್ರಿಮೇಡ್​ ಪಿಸ್ತೂಲ್, ವಾಕಿಟಾಕಿ, ಆಯುಧ ಸಿಕ್ಕಿದೆ ಎಂದು ಹೇಳಿದರು.

ಎಲ್ಲವೂ ತನಿಖೆಯಿಂದ ತಿಳಿಯುತ್ತದೆ ಎಂದರು.

 

 

 

RELATED ARTICLES

Related Articles

TRENDING ARTICLES