Friday, May 17, 2024

5 ಕೆ.ಜಿ ಅಕ್ಕಿ ಬದಲು ಹಣ ಪಡೆಯಲು ಇ-ಕೆವೈಸಿ ಕಡ್ಡಾಯ: ಗ್ಯಾನೇಂದ್ರ

ಬೆಂಗಳೂರು : 5 ಕೆ ಜಿ ಅಕ್ಕಿ ಬದಲು ಹಣ ಪಡೆಯಬೇಕಂದಲ್ಲಿ ಇ-ಕೆ ವೈ ಸಿ ಕಡ್ಡಾಯ ಎಂದು ಆಹಾರ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಗ್ಯಾನೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ವಿಪಕ್ಷ ನಾಯಕನಿಲ್ಲದೇ ಬಜೆಟ್ ಮಂಡನೆ: ರಾಜಕಿಯ ಇತಿಹಾಸದಲ್ಲಿ ಇದೇ ಮೊದಲು

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಗ್ಯಾರೆಂಟಿ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲು ಹಣ ಪಡೆಯಲು ಇ-ಕೈವೈಸಿ ಮತ್ತು ಆಧಾರ್ ಜೋಡಣೆಯಾಗಿರುವುದು ಕಡ್ಡಾಯ ಇಲ್ಲದಿದ್ದರೇ ನಿಮ್ಮ ಖಾತೆಗೆ ಹಣ ಜಮೆಯಾಗುವುದಿಲ್ಲ.

ರಾಜ್ಯದಲ್ಲಿ ಇದುವರೆಗೂ ಮೂರು ಲಕ್ಷಕ್ಕೂ ಹೆಚ್ಚು ಖಾತೆಗಳು ಕೆವೈಸಿಯಾಗಿಲ್ಲ. ಬ್ಯಾಂಕ್ ಖಾತೆಗಳ ಇ -ಕೆವೈಸಿ ಮಾಡಿಸದಿದ್ದರೇ , ಖಾತೆ ನಿಷ್ಕ್ರಿಯೆಯಾಗಿದ್ದರೇ ಡಿ.ಬಿ.ಟಿ ಮುಖಾಂತರ ಹಣ ವರ್ಗಾವಣೆಯಾಗುವುದು ಕಷ್ಟ.

ಕಳೆದ ಮೂರು ತಿಂಗಳ ಅವಧಿಯಲ್ಲಿ 5 ಲಕ್ಷ 37 ಸಾವಿರ ಬಿಪಿಎಲ್ ಕಾರ್ಡ್​ದಾರರು ಅಕ್ಕಿ ಪಡೆದುಕೊಂಡಿಲ್ಲವೋ ಅಂಥವರಿಗೆ ಅಕ್ಕಿ ದೊರೆಯುವುದಿಲ್ಲ ಆದರೇ ಹಣ ನೀಡುವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷದ 23 ಸಾವಿರದ 868 ಜನ ಬಿ.ಪಿ.ಎಲ್ ಕಾರ್ಡ್​ದಾರರಿದ್ದು ಜುಲೈ 10ರೊಳಗೆ 5 ಕೆ ಜಿ ಅಕ್ಕಿಯ  ಹಣ ಪಡಿತರಚೀಟಿದಾರರ ಖಾತೆಗಳಿಗೆ ಜಮೆಯಾಗಲಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES