Wednesday, January 22, 2025

ಪ್ರೀತಿಸಿ ಮದುವೆಯಾದ ಮಗಳು : ಮರ್ಯಾದೆಗೆ ಅಂಜಿ ಪ್ರಾಣ ಬಿಟ್ಟ ತಾಯಿ

ಗದಗ: ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ‌ ಗ್ರಾಮದಲ್ಲಿ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಹದ್ಲಿ ರಸ್ತೆಯ ಬರೋಡ ಬ್ಯಾಂಕ್ ಬಳಿಯ ನಿವಾಸಿ, ಅಂಗನವಾಡಿ ಶಿಕ್ಷಕಿಯಾಗಿದ್ದ ಸುನೀತಾ ಕೋ ವೀರಣ್ಣ ನಾಯಕವಾಡಿ (48) ಎಂಬ ಮಹಿಳೆ, ಮಗಳು ಕೊಟ್ಟ ಆಘಾತವನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಮಗಳು ಅದೇ ಏರಿಯಾದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಳು.

ಇದನ್ನೂ ಓದಿ: ಪ್ರಿಯತಮೆಯ ಕೊಂದು ಎಸ್ಕೇಪ್ ಆಗಿದ್ದ ಪ್ರೇಮಿಯ ಬಂಧನ

ಮಗಳು ಪ್ರೀತಿಸಿ ಮದುವೆಯಾಗಿ ಊರು ಬಿಟ್ಟು ಹೋಗಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ತಾಯಿ ಸುನೀತಾ ತನ್ನ ಸಹೋದರಿಯ ಮನೆ ಮುಂದಿರುವ (ಸ್ಟೇರ್ ಕೇಸ್) ಮಳಿಗೆ ಹತ್ತುವು ಮೆಟ್ಟಿಲುಗಳ ಪೈಪ್ ಗೆ ಸೀರೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

RELATED ARTICLES

Related Articles

TRENDING ARTICLES