Monday, May 13, 2024

ಪ್ರಿಯತಮೆಯ ಕೊಂದು ಎಸ್ಕೇಪ್ ಆಗಿದ್ದ ಪ್ರೇಮಿಯ ಬಂಧನ

ಬೆಂಗಳೂರು: ಜೀವನ ಭೀಮಾನಗರ(Jeevan Bima Nagar) ಟೆಕ್ಕಿ ಆಕಾಂಕ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಪಿತ್ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೌದು, ಕೋಡಿಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ನಡೆದಿದ್ದ ಆಕಾಂಕ್ಷ ಬಿದ್ಯಾಸ‌ (23) ಕೊಲೆ ಪ್ರಕರಣ ಭೇದಿಸಿರುವ ಜೀವನ ಭೀಮಾನಗರ ಠಾಣೆ ಪೊಲೀಸರು, ಆರೋಪಿ ಅರ್ಪಿತ್ ಗುರಿಜಾಲ್‌ನನ್ನು ಅಸ್ಸಾಂನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ಘಟನೆಯ ಹಿನ್ನಲೆ 

ಮೃತ ಆಕಾಂಕ್ಷ ಬೇರೆಯವರ ಜೊತೆ ಪ್ರೀತಿಯಲ್ಲಿದ್ದನ್ನ ಆರೋಪಿ ತಿಳಿದುಕೊಂಡಿದ್ದ. ಇದು ಆತನಿಗೆ ತಿಳಿದ ಮೇಲೆ, ಬ್ರೇಕ್ ಆಫ್ ಮಾಡಿಕೊಳ್ಳುವಂತೆ ಅಕಾಂಕ್ಷ ಹೇಳಿದ್ದಳು. ಆದರೂ ಆಕೆಯನ್ನ ಬಿಡದ ಆರೋಪಿ ಅರ್ಪಿತ್, ಮದುವೆಯಾಗುವಂತೆ ಒತ್ತಾಯ ಮಾಡಿದ್ದ. ಈ ವೇಳೆ ಆಕಾಂಕ್ಷ ಮದುವೆಯಾಗೊಲ್ಲ ಅಂದಿದ್ದಾಳೆ. ಇದೇ ಕಾರಣಕ್ಕೆ ಅರ್ಪಿತ್ ದಿಂಬಿನಿಂದ ಉಸಿರುಗಟ್ಟಿಸಿ ಆಕಾಂಕ್ಷಳನ್ನ ಹತ್ಯೆ ಮಾಡಿದ್ದಾನೆ.

ಅಕೌಂಟ್​​ನಲ್ಲಿ 20 ಲಕ್ಷ ಇದ್ರೂ ಕೂಲಿ ಕೆಲಸ 

ಆರೋಪಿ ಅರ್ಪಿತ್ ಇಂಜಿನಿಯರಿಂಗ್​ ಓದಿದ್ದ. ಮದುವೆಗೆ ಒಪ್ಪದ ಪ್ರಿಯತಮೆಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್​ ಆಗಿದ್ದಾಗ ಆತ ಬಳಿ 5 ಸಾವಿರ ನಗದು ಇದನ್ನೇ ಇಟ್ಟುಕೊಂಡು ರಾಜಧಾನಿ ಬಿಟ್ಟು ಉತ್ತರ ಭಾರತಕ್ಕೆ ತೆರಳಿದ್ದ. ಅಲ್ಲಿ ಇತ ತಲೆಮರೆಸಿಕೊಳ್ಳಲು ಕೂಲಿ ಕೆಲಸ ಮಾಡಿದ್ದ.

ಮೂರು ರಾಜ್ಯ ಸುತ್ತಿದ್ದ ಅರ್ಪಿತ್

ಕೊಲೆ ಪ್ರಕರಣ ತನಿಖೆ ಆರಂಭಿಸಿದ ಜೀವನಭೀಮಾನಗರ ಪೊಲೀಸರು ಆರೋಪಿ ಹಿಂದೆ ಬಿದ್ದಿದ್ದರು. ಇತ ಬರೊಬ್ಬರಿ ಮೂರು ರಾಜ್ಯವನ್ನ ಸುತ್ತಿದ್ದ. ಇನ್ನು ಈತ ಹಿಂದೆ ಕೆಲಸ ಮಾಡುತ್ತಿದ್ದ ಹೈದ್ರಾಬಾದ್​ನಲ್ಲಿ ವಿಚಾರಣೆ ನಡೆಸಿದ್ದ ಪೊಲೀಸರು ತಾಯಿ ಕೆಲಸ ಮಾಡ್ತಿದ್ದ ದೆಹಲಿಯಲ್ಲೂ ಶೋಧ ನಡೆಸಿದ್ದರು.5 ಸಾವಿರ ಹಣ ತೆಗೆದುಕೊಂಡು ರೈಲು ಏರಿದ್ದ ಆರೋಪಿ ಅರ್ಪಿತ್. ಇನ್ನೂ ಆತನ ಎಲ್ಲಾ ಅಕೌಂಟ್​ಗಳನ್ನ ಪೊಲೀಸರು ಫ್ರೀಜ್ ಮಾಡಿದ್ದರು.

ದುಡ್ಡಿಗೆ ಸಮಸ್ಯೆಯಾಗಿ ಸ್ನೇಹಿತನನ್ನ ಸಂಪರ್ಕಿಸಿ ಸಿಕ್ಕಿಬಿದ್ದ 

ಕೇವಲ 5 ಸಾವಿರ ಹಣ ಇಟ್ಟುಕೊಂಡು ಊರು ಬಿಟ್ಟಿದ್ದ ಆರೋಪಿ. ಬಳಿಕ ಅಕೌಂಟ್​ಗಳನ್ನು ಪೊಲೀಸರು ಫ್ರೀಜ್​ ಮಾಡಿದ್ದರಿಂದ ಆತನಿಗೆ ಹಣದ ಸಮಸ್ಯೆಯಾಗಿ ತನ್ನ ಸ್ನೇಹಿತನನ್ನು ಸಂಪರ್ಕ ಮಾಡಿದ್ದ. ಬಳಿಕ ಪೊಲೀಸರು ಅತನ ಸ್ನೇಹಿತನ ಬೆನ್ನು ಬಿದ್ದಿದ್ದು, ಆತನಿಗೆ ತಿಳಿಯುತ್ತಿದ್ದಂತೆ ದೆಹಲಿಗೆ ಎಸ್ಕೇಪ್ ಆಗಿದ್ದ. ಸ್ನೇಹಿತನ ಮಾಹಿತಿ ಮೇರೆಗೆ ದೆಹಲಿಗೆ ತೆರಳಿದ್ದ ಜೀವನ್ ಭೀಮಾನಗರ ಪೊಲೀಸರು. ಅದ್ರೆ, ದೆಹಲಿ ತೆರಳುವ ಮಾರ್ಗ ಮಧ್ಯೆ ಭೂಫಾಲ್​ನಲ್ಲಿ ಇಳಿದು ಅಸ್ಸಾಂಗೆ ಹೋಗಿದ್ದ

ಅಸ್ಸಾಂನಲ್ಲಿ ಬೀದಿಬದಿ ವ್ಯಾಪಾರಿಗಳ ಜತೆ ಕೆಲ್ಸ ಮಾಡ್ತಿದ್ದ ಅರ್ಪಿತ್

ದೆಹಲಿಗೆ ಹೋದ ಮಾಹಿತಿ ಮೇರೆಗೆ ಪೊಲೀಸರು ದೆಹಲಿಯನ್ನ ಹುಡುಕಾಟ ನಡೆಸಿದ್ದರು. ಆದರೆ, ಇತ ಅಸ್ಸಾಂನಲ್ಲಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಪ್ರತಿದಿನಾ 150 ರೂಪಾಯಿ ಸಂಬಳಕ್ಕೆ ಕೆಲಸ ಮಾಡಿಕೊಂಡಿದ್ದ. ಇನ್ನು ಇತ ಅಸ್ಸಾಂನಲ್ಲಿರೋ ಬಗ್ಗೆ ಮಾಹಿತಿ ಪಡೆದು, ಖಾಕಿ ಪಡೆ ಬರುವಷ್ಟರಲ್ಲಿ ವಿಜಯವಾಡಕ್ಕೆ ಕಾಲ್ಕಿತ್ತಿದ್ದ  ಮತ್ತೆ ಬೆಂಗಳೂರಿಗೆ ಬಂದಿದ್ದ ಅರ್ಪಿತ್.

ಬಳಿಕ ವೈಟ್ ಫೀಲ್ಡ್​ನಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಪೊಲೀಸರಿಗೆ ಲಾಕ್ ಆಗಿದ್ದ. ಇದೀಗ ಜೆ.ಬಿ ನಗರ ಪೊಲೀಸರು ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

 

RELATED ARTICLES

Related Articles

TRENDING ARTICLES