Tuesday, May 21, 2024

ವೈದ್ಯೆಯ ಲಂಚಾವತಾರ: ಆರೊಗ್ಯಕೇಂದ್ರದಲ್ಲಿ ಹಣ ನೀಡಿದರಷ್ಟೆ ಚಿಕಿತ್ಸೆ

ಮೈಸೂರು : ವೈದ್ಯೆಯೊಬ್ಬರು ಪ್ರತಿ ಉಚಿತ ಸೇವೆಗಳಿಗೂ ಖಾಸಗಿ ಆಸ್ಪತ್ರೆಯಂತೆ ದರ ನಿಗಧಿ ಪಡಿಸಿ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಳಿ ಬಂದಿದೆ.

ಇದನ್ನೂ ಓದಿ: ಪರಿಷತ್ ಸದಸ್ಯರಾಗಿ ಇಂದು ಜಗದೀಶ್ ಶೆಟ್ಟರ್ ಪ್ರಮಾಣ ವಚನ ಸ್ವೀಕಾರ

ಉದಯಗಿರಿ ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯೆ ಕೋಮಲ, ಆರೋಗ್ಯ ಕೇಂದ್ರಕ್ಕೆ ಆಗಮಿಸುವ ಬಾಣಂತಿಯರು, ಮಕ್ಕಳು, ವೃದ್ದರೆನ್ನದೇ ಎಲ್ಲರಿಂದಲೂ ಲಂಚಕ್ಕೆ ಬೇಡಿಕೆ ಇಟ್ಟು ಸಿಬ್ಬಂದಿ ಮತ್ತು ನರ್ಸ್​ಗಳ ಮುಖಾಂತರ ಹಣ ವಸೂಲಿ ಮಾಡುತ್ತಿದ್ದಾರೆ.

ಇಲ್ಲಿನ ಅವ್ಯವಹಾರಗಳ ಬಗ್ಗೆ ವೈದ್ಯಾಧೀಕಾರಿಗಳಾಗಲಿ, ಶಾಸಕರಾಗಲಿ, ಪಾಲಿಕೆ ಸದಸ್ಯರಾಗಲಿ ಕ್ರಮಕ್ಕೆ ಮುಂದಾಗಿಲ್ಲ ಯಾರ ಭಯವೂ ಇಲ್ಲದೇ ರೋಗಿಗಳಿಂದ ವಸೂಲಿಗಿಳಿದಿರುವ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES