Sunday, December 22, 2024

ಎಲ್ಲಿದೀರಪ್ಪ ಕಾಂಗ್ರೆಸ್ ನಾಯಕರು? ಎಲ್ಲಿದ್ದೀರ ಸಿದ್ದರಾಮಯ್ಯ? ಎಲ್ಲಿದ್ದೀರ ಡಿಕೆಶಿ? : ಅಶ್ವತ್ಥನಾರಾಯಣ

ಬೆಂಗಳೂರು : ಎಲ್ಲಿದೀರಪ್ಪ ಕಾಂಗ್ರೆಸ್ ನಾಯಕರು? ಎಲ್ಲಿದೀರ ಸಿದ್ದರಾಮಯ್ಯ? ಎಲ್ಲಿದೀರಪ್ಪ ಡಿಕೆಶಿ? ನಿಮ್ಮ ಜೇಬಿಂದ ಹಣ ಹಾಕಿ ಗ್ಯಾರಂಟಿಗಳನ್ನು ಕೊಡ್ತಿಲ್ವಲ್ಲ? ಎಂದು ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉಚಿತ ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಈ ಸರ್ಕಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಆದಾಯದ ಮಾನದಂಡದ ಮೇಲೆ ಮಾತ್ರ ಗ್ಯಾರಂಟಿ ಕೊಡ್ತೀವಿ ಅಂದಿದ್ರು. ಗ್ಯಾರಂಟಿಗಳಿಗೆ ದಿನಾಂಕ ಮಾತ್ರ ಘೋಷಣೆ ಆಗಿದೆ. ಆದ್ರೆ, ಯೋಜನೆ ಚಾಲನೆ ಆಗಿಲ್ಲ. ಕಾಂಗ್ರೆಸ್‌ನವರು ಮಾತು ತಪ್ಪುತ್ತಿದ್ದಾರೆ. ಅವರು ನುಡಿದಂತೆ ಉಚಿತ ಗ್ಯಾರಂಟಿಗಳನ್ನು ಕೊಡಲಿ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಉಪವಾಸದಿಂದ ಸಾಯಲಿ ಅಂತ ಅಕ್ಕಿ ಕೊಡ್ತಿಲ್ಲ : ಮಲ್ಲಿಕಾರ್ಜುನ ಖರ್ಗೆ ಕಿಡಿ

ಕಾಂಗ್ರೆಸ್‌ನವರಿಗೆ ಭಂಡತನ ಬಂದಿದೆ

ಕಾಂಗ್ರೆಸ್‌ನವರಿಗೆ ಭಂಡತನ ಬಂದಿದೆ. ಕಾಂಗ್ರೆಸ್ ಸಂಸ್ಕೃತಿ ಹೇಳಿ ಕೊಡದೇ ಇರೋದು, ಡಿಕೆಶಿ ಅವರೇ ಈ ಕೂಡಲೇ ಅಕ್ಕಿ ಕೊಡಿ, ಕೇಂದ್ರ ಈಗಾಗಲೇ ಐದು ಕಿಲೋ ಕೊಡ್ತಿದೆ. ನೀವು ಇನ್ನೂ ಒಂದು ಕಿಲೋ ಅಕ್ಕಿ ಕೊಟ್ಟಿಲ್ಲ. ಅನ್ನಭಾಗ್ಯ ಕೊಟ್ಟವರು ನಾವು, ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚು ಅನ್ನಭಾಗ್ಯ ಕೊಟ್ಟೋರು ನಾವು. ಸಿದ್ದರಾಮಯ್ಯ ಅವರೇ ಅಂಕಿ ಅಂಶ ಸಮೇತ ಮಾತಾಡಿ ಎಂದು ಕಿಡಿಕಾರಿದ್ದಾರೆ.

ಇವ್ರಿಗೆ ಕಳ್ಳನಿಗೆ ಪಿಳ್ಳೆ ನೆವ ಆಗಿದೆ

ಗ್ಯಾರಂಟಿಗಳನ್ನು ಕೊಡೋಕ್ಕೆ ಶುರು ಮಾಡಿ, ಯಾರಿಗೆ ಸಿಕ್ಕಲ್ವೋ ಅವ್ರು ಅರ್ಜಿ ಹಾಕ್ಕೋತಾರೆ. ಈ ಸರ್ಕಾರಕ್ಕೆ ಗ್ಯಾರಂಟಿಗಳನ್ನು ಕೊಡೋಕ್ಕೆ ಇಷ್ಟ ಇಲ್ಲ. ಇವರಿಗೆ ಕಳ್ಳನಿಗೆ ಪಿಳ್ಳೆ ನೆವ ಆಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES