ಬೆಂಗಳೂರು : ಸಾಮಾನ್ಯವಾಗಿ ಎಲ್ಲರಿಗೂ ಕಾಫಿ ಕುಡಿಯುವ ಅಭ್ಯಾಸ ಇರುತ್ತೆ. ಕಾಫಿ ಕುಡಿದ್ರೆ ತಲೆ ನೋವು ಕಡಿಮೆಯಾಗುತ್ತೆ ಅನ್ನೋರು ಹಲವರಿದ್ದಾರೆ. ಇನ್ನೂ ಕೆಲವರು ರಿಲ್ಯಾಕ್ಸ್ ಗಾಗಿ ಕಾಫಿ ಕುಡಿಯುತ್ತಾರೆ. ಆದರೆ, ದೇಹದ ಸೌಂದರ್ಯಕ್ಕೆ ಕಾಫಿಪುಡಿ ಎಷ್ಟು ಉಪಯೋಗಕಾರಿ ಅಂತ ನಿಮಗೆ ಗೊತ್ತಿಲ್ಲ ಅನಿಸುತ್ತೆ.
ಹೌದು, ಕಾಫಿ ಸೇವನೆ ಆರೋಗ್ಯಕ್ಕೆ ಉತ್ತಮ ಎಂದೇ ಪರಿಗಣಿಸಲಾಗಿದೆ. ಸೌಂದರ್ಯ ಸಾಧನಗಳ ವಿಚಾರಕ್ಕೆ ಬಂದಾಗ ಕಾಫಿಪುಡಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಇದು ಮುಖದ ಕಾಂತಿ ಹಾಗೂ ಕೈಗಳ ಆರೈಕೆಗೂ ಉತ್ತಮ ಮದ್ದು. ಹಾಗಾದ್ರೆ, ಕಾಫಿಪುಡಿಯಿಂದ ಏನೆಲ್ಲಾ ಉಪಯೋಗಗಳಿವೆ ಅಂತ ನೋಡೋಣ ಬನ್ನಿ..
ಇದನ್ನೂ ಓದಿ : ಮುಖದ ಹೊಳಪು ಹೆಚ್ಚಿಸಲು ಮನೆಯಲ್ಲಿದೆ ಸಿಂಪಲ್ ಟಿಪ್ಸ್!
ಕಾಫಿಪುಡಿಯನ್ನು ಹಲವು ರೀತಿಯ ಸ್ಕ್ರಬ್ ಗಳಾಗಿ ಬಳಸಬಹುದು
- ಕಾಫಿಪುಡಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ(ALMOND OIL)ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ.
- ಸ್ವಲ್ಪ ಕಾಫಿಪುಡಿ, ಸ್ವಲ್ಪ ಜೇನುತುಪ್ಪ, ಸ್ವಲ್ಪ ತೆಂಗಿನೆಣ್ಣೆ ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ನಿಧಾನವಾಗಿ ಸ್ಕ್ರಬ್ ಮಾಡಿ.
- ಕಾಫಿಪುಡಿಯೊಂದಿಗೆ ಸ್ವಲ್ಪ ಹಾಲು ಸೇರಿಸಿ ಸ್ಕ್ರಬ್ ಮಾಡಬಹುದು.
- ಕಾಫಿಪುಡಿ ಜೊತೆ ಆಲೋವೆರಾ ಜೆಲ್ ಸೇರಿಸಿ ಸ್ಕ್ರಬ್ ಆಗಿ ಬಳಸಬಹುದು.
- ಕೇವಲ ನೀರಿನೊಂದಿಗೂ ಕಾಫಿಪುಡಿ ಬೆರೆಸಿ ಸ್ಕ್ರಬ್ ಮಾಡಬಹುದು.
ಕೇವಲ ಮುಖಕ್ಕೆ ಮಾತ್ರವಲ್ಲದೆ ಕೈಗಳ ಆರೈಕೆಗೂ ಕೂಡ ಇದನ್ನು ಬಳಸಬಹುದು. ಹೀಗೆ ವಾರಕ್ಕೆ ಅಥವಾ 15 ದಿನಕ್ಕೆ ಒಂದು ಬಾರಿ ಈ ರೀತಿ ಮಾಡಿದ್ರೆ, ನಿಮ್ಮ ಮುಖ ಕಾಂತಿಯುತವಾಗಿಯೂ ಹೊಳೆಯುತ್ತೆ. ಸುಕ್ಕುಗಟ್ಟದಂತೆಯೂ ತಡೆಯುತ್ತೆ.
- ರಜನಿ ಎ.ಕೆ, ಪವರ್ ಟಿವಿ