Wednesday, April 24, 2024

ಮುಖದ ಹೊಳಪು ಹೆಚ್ಚಿಸಲು ಮನೆಯಲ್ಲಿದೆ ಸಿಂಪಲ್ ಟಿಪ್ಸ್!

ಬೆಂಗಳೂರು : ಸೌಂದರ್ಯಕ್ಕೆ ಮತ್ತೊಂದು ಹೆಸರು ಮಹಿಳೆಯರು. ಆದರೆ, ಪ್ರತಿನಿತ್ಯ ನೋಡಲು ಅಂದವಾಗಿ ಕಾಣೋದು ಅಷ್ಟು ಸುಲಭವಲ್ಲ. ಅಂದ ವೃದ್ದಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ಮಹಿಳೆಯರಿಗೆ ಒಂದು ಸವಾಲಿನ ಕೆಲಸ.

ಹೌದು, ಅದಕ್ಕಾಗಿಯೇ ಭಾಗಶಃ ಮಹಿಳೆಯರು/ಹುಡುಗಿಯರು ಮನೆಯಲ್ಲಿಯೇ ತಯಾರಿಸಿ, ಉಪಯೋಗಿಸುವ  ಕೆಲವೊಂದು ಬ್ಯೂಟಿ ಟಿಪ್ಸ್ ನ ಫಾಲೋ ಮಾಡುತ್ತಾರೆ. ಕೆಲವರು ಮೆಡಿಸನ್, ಆಯುರ್ವೇಧ ಚಿಕಿತ್ಸೆ(ಆಯುರ್ವೇಧ ಔಷಧಗಳ) ಮೊರೆ ಹೋಗುತ್ತಾರೆ. ಇನ್ನುಮುಂದೆ ಅದಕ್ಕೆಲ್ಲ ಬಾಯ್ ಹೇಳಿ, ನಾವು ಹೇಳುವ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ಸದ್ಯ ಸೌಂದರ್ಯದ ಮೇಲೆ ಪ್ರಭಾವ ಬೀರುವ ಕೆಲವು ಪ್ರಮುಖ ಅಂಶಗಳೆಂದರೆ, ಪೌಷ್ಠಿಕ ಆಹಾರ ಸೇವನೆ, ಉತ್ತಮ ನಿದ್ದೆ, ಶುದ್ದ ಗಾಳಿ ಸೇವನೆ, ದಿನನಿತ್ಯ ಯೋಗ, ವ್ಯಾಯಾಮ, ಇತ್ಯಾದಿ.

ಇದನ್ನೂ ಓದಿ : ಹೀಗೆ ಮಾಡಿದ್ರೆ.. ಕೂದಲು ಉದುರುವಿಕೆ ತಕ್ಷಣ ನಿಂತು ಹೋಗುತ್ತೆ!

ತ್ವಚೆಯ ಹೊಳಪಿಗಾಗಿ ಸಿಂಪಲ್ ಟಿಪ್ಸ್

ರಾತ್ರಿ ಮಲಗುವ ಮುಂಚೆ ಹೆಸರುಕಾಳು, ಶೇಂಗಾ, ಕಡಲೆ ಕಾಳು, ಒಣ ದ್ರಾಕ್ಷಿ, ಒಣ ಖರ್ಜೂರ, ಬಾದಾಮಿಯನ್ನು ಒಂದು ನೀರಿನ ಬೌಲ್ ನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ತಕ್ಷಣ ಬರೀ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರು ಸೇವಿಸಿದ ಬಳಿಕ ರಾತ್ರಿ ನೆನೆಸಿಟ್ಟದ್ದ ಕಾಳುಗಳುಗಳನ್ನು ಸೇವಿಸಬೇಕು. ಈ ವಿಧಾನವನ್ನು ನಿತ್ಯ ಪಾಲಿಸಿದರೆ ಕೇವಲ ಒಂದೇ ತಿಂಗಳಿನಲ್ಲಿ ನಿಮ್ಮ ಮುಖದಲ್ಲಿರುವ ಮೊಡವೆಗಳು ಮತ್ತು ಕಲೆಗಳು ಮಾಯವಾಗಿ, ನಿಮ್ಮ ಮುಖದಲ್ಲಿ ಹೊಳಪು ಎದ್ದು ಕಾಣುತ್ತದೆ.

ಬೋನಸ್ ಟಿಪ್ಸ್

ದಿನ ನಿತ್ಯ 3 ರಿಂದ 4 ಲೋಟ ನೀರು, ಒಂದು ಲೋಟ ರಾಗಿ ಅಂಬಲಿ ಸೇವಿಸಿದ್ರೆ ನಿಮ್ಮ ದೇಹದಲ್ಲಿರುವ ಬೊಜ್ಜು ಕಡಿಮೆ ಆಗುತ್ತದೆ.

  • ಪ್ರೀತಿ ಕುಮಾರ್, ಪವರ್ ಟಿವಿ

RELATED ARTICLES

Related Articles

TRENDING ARTICLES