Monday, December 23, 2024

ತೆರಿಗೆ ಪಾಲು : ಕೇಂದ್ರದಿಂದ ಕರ್ನಾಟಕಕ್ಕೆ 4,314 ಕೋಟಿ ರೂ. ಬಿಡುಗಡೆ

ಬೆಂಗಳೂರು : ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯ 3ನೇ ಕಂತನ್ನು ರಾಜ್ಯ ಸರ್ಕಾರಗಳಿಗೆ ಸೋಮವಾರ  ಬಿಡುಗಡೆ ಮಾಡಿದೆ. ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ 4,314 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ಎಲ್ಲಾ ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯು ತೆರಿಗೆ ಹಣ ಬಿಡುಗಡೆ ಮಾಡಿದ್ದು, ಒಟ್ಟು 1,18,280 ಕೋಟಿ ರೂ. ಮೊತ್ತದ ತೆರಿಗೆ ಹಂಚಿಕೆ ಬಿಡುಗಡೆ ಮಾಡಲಾಗಿದೆ.

ಉತ್ತರ ಪ್ರದೇಶಕ್ಕೆ 21 ಸಾವಿರ ಕೋಟಿ ರೂ., ಬಿಹಾರಕ್ಕೆ 11 ಸಾವಿರ ಕೋಟಿ ರೂ., ಮಧ್ಯ ಪ್ರದೇಶಕ್ಕೆ 9 ಸಾವಿರ ಕೋಟಿ ರೂ., ಪಶ್ಚಿಮ ಬಂಗಾಳಕ್ಕೆ 8 ಸಾವಿರ ಕೋಟಿ ರೂ. ಮಾಡಿದೆ ಮಾಡಿದೆ. ಆದ್ರೆ, ಕರ್ನಾಟಕಕ್ಕೆ 4,314 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ.

ಇದನ್ನೂ ಓದಿ : ತೆರಿಗೆ ರೂಪದಲ್ಲಿ ಹೆಚ್ಚಿನ ಹಣ ಕೊಡುತ್ತಿರುವುದು ನಮ್ಮ ಕರ್ನಾಟಕ ರಾಜ್ಯ: ಹೆಚ್ ಡಿಕೆ

ಯಾವ ರಾಜ್ಯಕ್ಕೆ ಎಷ್ಟು ಹಣ ಬಿಡುಗಡೆ

  • ಉತ್ತರ ಪ್ರದೇಶ : 21,218 ಕೋಟಿ ರೂ.
  • ಬಿಹಾರ 11,897 ಕೋಟಿ ರೂ.
  • ಕರ್ನಾಟಕ : 4,314 ಕೋಟಿ ರೂ.
  • ಆಂಧ್ರ ಪ್ರದೇಶ : 4,787 ಕೋಟಿ ರೂ.
  • ಮಧ್ಯಪ್ರದೇಶ : 9,285 ಕೋಟಿ ರೂ.
  • ಮಹಾರಾಷ್ಟ್ರ : 7,472 ಕೋಟಿ ರೂ.
  • ಮೇಘಾಲಯ : 907 ಕೋಟಿ ರೂ.
  • ತಮಿಳುನಾಡು : 4,825 ಕೋಟಿ ರೂ.
  • ಸಿಕ್ಕಿಂ : 459 ಕೋಟಿ ರೂ.
  • ಪಂಜಾಬ್‌ : 2,137 ಕೋಟಿ ರೂ.
  • ನಾಗಾಲ್ಯಾಂಡ್ : 673 ಕೋಟಿ ರೂ.
  • ಮಿಜೋರಾಂ : 591 ಕೋಟಿ ರೂ.
  • ಹರಿಯಾಣ : 1,293 ಕೋಟಿ ರೂ.
  • ಹಿಮಾಚಲ ಪ್ರದೇಶ : 982 ಕೋಟಿ ರೂ.
  • ಜಾರ್ಖಂಡ್​ : 3,912 ಕೋಟಿ ರೂ.
  • ಕೇರಳ : 2,277 ಕೋಟಿ ರೂ.
  • ಪ.ಬಂಗಾಳ : 8,898 ಕೋಟಿ ರೂ.
  • ಗುಜರಾತ್​ : 4,114 ಕೋಟಿ ರೂ.
  • ಅಸ್ಸಾಂ : 3,700 ಕೋಟಿ ರೂ.

RELATED ARTICLES

Related Articles

TRENDING ARTICLES