Thursday, January 9, 2025

ಇಂದು ಸಿದ್ದರಾಮಯ್ಯ ಮೈಸೂರು ಪ್ರವಾಸ : ಅರ್ಧ ಕಿ.ಮೀ. ರೋಡ್ ಶೋ

ಬೆಂಗಳೂರು : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಇಂದು ತವರು ಜಿಲ್ಲೆ ಮೈಸೂರಿಗೆ ಮೊದಲ ಬಾರಿಗೆ ಪ್ರವಾಸ ಕೈಗೊಂಡಿದ್ದಾರೆ.

ಇಂದು ಮೈಸೂರಿಗೆ ಆಗಮಿಸಲಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಿದ್ದರಾಮಯ್ಯ ಅವರು ಬೆಳಗ್ಗೆ 12.20ಕ್ಕೆ ಸುತ್ತೂರು ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ವರುಣ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಬೋರೆಯಲ್ಲಿ ಬೆಳಗ್ಗೆ 12.35 ಗಂಟೆಗೆ ಹಮ್ಮಿಕೊಂಡಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2.45 ಗಂಟೆಗೆ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಮೈಸೂರಿನಲ್ಲೇ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಕಾಲ್ಗುಣದಿಂದ ಮುಂಗಾರು ಓಡಿಹೋಯಿತೇ? : ಬಿಜೆಪಿ ಲೇವಡಿ

ತೆರೆದ ವಾಹನದಲ್ಲಿ ರೋಡ್ ಶೋ

ಇಂದು ಮೈಸುರಿಗೆ ಆಗಮಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಸಿದ್ಧತೆ ಮಾಡಿಕೊಮಡಿದೆ. ಈ ವೇಳೆ 50 ಸಾವಿರ ಮಂದಿ ಸೇರಲಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ಅವರು ಅರ್ಧ ಕಿಲೋ ಮೀಟರ್‌ ತೆರೆದ ವಾಹನದಲ್ಲಿ ರೋಡ್ ಶೋ ಮಾಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ.ಜೆ.ವಿಜಯ್ ಕುಮಾರ್ ತಿಳಿಸಿದ್ದಾರೆ.

ಸಿಎಂ ಮೈಸೂರು ಪ್ರವಾಸ ವೇಳಾಪಟ್ಟಿ

  • ಮಧ್ಯಾಹ್ನ 12.20ಕ್ಕೆ ಸುತ್ತೂರಿನ JSS ಶಾಲಾ ಹೆಲಿಪ್ಯಾಡ್​ಗೆ ಆಗಮನ
  • ಅಲ್ಲಿಂದ ರಸ್ತೆ ಮೂಲಕ ನಂಜನಗೂಡಿನ ಬಿಳಿಗೆರೆ ಗ್ರಾಮಕ್ಕೆ ಪ್ರಯಾಣ
  • ಮಧ್ಯಾಹ್ನ 12.35ಕ್ಕೆ ಬಿಳಿಗೆರೆ ಗ್ರಾಮದಲ್ಲಿ ಬೃಹತ್ ಕೃತಜ್ಞತಾ ಸಭೆ
  • ಅದ್ದೂರಿ ಸಭೆಯಲ್ಲಿ ಸೇರಲಿರೋ 25 ಸಾವಿರಕ್ಕೂ ಹೆಚ್ಚು ಜನ
  • ಸಭೆ ಬಳಿಕ ಮಧ್ಯಾಹ್ನ 2.45ಕ್ಕೆ ಶ್ರೀ ಸುತ್ತೂರು ಕ್ಷೇತ್ರಕ್ಕೆ ಭೇಟಿ
  • ಮಧ್ಯಾಹ್ನ 3.50ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ
  • ಸಂಜೆ 4ಕ್ಕೆ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಿಗಳ ಸಭೆ
  • ಸಭೆ ಬಳಿಕ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರೋ ಸಿಎಂ ಸಿದ್ದರಾಮಯ್ಯ

RELATED ARTICLES

Related Articles

TRENDING ARTICLES