Friday, May 17, 2024

ಗೂಗಲ್ ಮ್ಯಾಪ್ ನಲ್ಲಿರುವ ‘ಆ.. ಹೆಣ್ಣಿನ ಧ್ವನಿ’ ಇವರದ್ದೇ ನೋಡಿ!

ಬೆಂಗಳೂರು : ಟೆಕ್ನಾಲಾಜಿ ಎಷ್ಟು ಮುಂದಿದೆ ಅಂದರೆ, ನಾವು ಪ್ರಪಂಚದ ಯಾವ ಮೂಲೆಗೆ ಬೇಕಾದರು ಯಾರ ಸಹಾಯವಿಲ್ಲದೇ  ಕೇವಲ ಮೊಬೈಲ್ ಸಹಾಯದಿಂದ ತಲುಪಬಹುದು. ಅದಕ್ಕೆ ಕಾರಣವಾಗುವುದು ಗೂಗಲ್ ಮ್ಯಾಪ್​. ನಾವು ಎಲ್ಲಿಗೆ ಬೇಕಾದರು ನಾವಿಗೇಷನ್ ಆನ್ ಮಾಡಿಕೊಂಡು ಸುಲಭವಾಗಿ ತಲುಪಬಹುದು. ಇದು ಎಲ್ಲರಿಗೂ ಗೊತ್ತಿರೋ ವಿಚಾರ.

ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂದು ನಾವಿಗೇಷನ್ ಸೆಟ್ ಮಾಡಿ ಸ್ಟಾರ್ಟ್ ಮಾಡಿದರೆ ಸಾಕು ಒಂದು ಹೆಣ್ಣಿನ ಧ್ವನಿ ನಮಗೆ ಕೇಳಲಾರಂಭಿಸುತ್ತದೆ. ಇಲ್ಲಿ ಬಲಕ್ಕೆ ಹೋಗಿ, ಇಲ್ಲಿ ಎಡಕ್ಕೆ ತಿರುಗಿ ಅಂತೆಲ್ಲಾ ಗೈಡ್ ಮಾಡುವ ಧ್ವನಿ ಕೇಳಿಸುತ್ತದೆ. ಹಾಗಾದ್ರೆ ಆ ಹೆಣ್ಣಿನ ಧ್ವನಿ ಯಾರದ್ದು ಎಂದು ನಿಮಗೆ ತಿಳಿದಿದ್ಯಾ?

ಇದನ್ನೂ ಓದಿ : ಹಾವಿಗೆ ಪ್ರತ್ಯೇಕ ಕೋಣೆ, ಹಾವಿನ ಜೊತೆಯಲ್ಲೇ ವಾಸಿಸುವ ಜನರು : ಮಹಾರಾಷ್ಟ್ರದಲ್ಲಿದೆ ವಿಲಕ್ಷಣ ಗ್ರಾಮ

ಆ ಹೆಣ್ಣಿನ ಧ್ವನಿ ಆಸ್ಟ್ರೇಲಿಯಾ ಮೂಲದ ಕಾರೆನ್ ಜಾಕಬ್ಸನ್ ಎಂಬ ಗಾಯಕಿಯದ್ದು. ಕಾರೆನ್ ಜಾಕಬ್ಸನ್ ಗಾಯಕಿ ಅಷ್ಟೇ ಅಲ್ಲದೇ, ವಾಯ್ಸ್ ಓವರ್ ಕಲಾವಿದೆ ಕೂಡ ಹೌದು.

ಗೂಗಲ್ ಮ್ಯಾಪ್​ ಧ್ವನಿಗಾಗಿ ಹುಡುಕುತ್ತಿದ್ದಾಗ, ಕಾರೆನ್ ಅವರ ವಾಯ್ಸ್ ಚೆನ್ನಾಗಿ ಸೆಟ್ ಆಗುತ್ತದೆಂದು ಭಾವಿಸಿದ ಗೂಗಲ್ ಕಂಪೆನಿ ಆಕೆ ವಾಯ್ಸನ್ನು ಫೈನಲ್ ಮಾಡಲಾಯಿತು. ಕಾರೆನ್ ಜಾಕಬ್ಸನ್ ಅವರನ್ನು GPS GIRL ಎಂದು ಕರೆಯಲಾಗುತ್ತದೆ.

⦁ ವಿದ್ಯಾ ಸಿದ್ದರಾಮಯ್ಯ, ಪವರ್​ ಟಿವಿ

RELATED ARTICLES

Related Articles

TRENDING ARTICLES