Thursday, April 18, 2024

ಹಾವಿಗೆ ಪ್ರತ್ಯೇಕ ಕೋಣೆ, ಹಾವಿನ ಜೊತೆಯಲ್ಲೇ ವಾಸಿಸುವ ಜನರು : ಮಹಾರಾಷ್ಟ್ರದಲ್ಲಿದೆ ವಿಲಕ್ಷಣ ಗ್ರಾಮ

ಭಾರತ ವಿಸ್ಮಯಗಳ ಆಗರ. ಇಲ್ಲಿ ಹಲವಾರು ವಿಶೇಷತೆ, ತಾಣಗಳು ಎಂಥವರನ್ನು ಚಕಿತಗೊಳಿಸುತ್ತದೆ. ಮಹಾರಾಷ್ಟ್ರದಲ್ಲಿರುವ ಒಂದು ವಿಲಕ್ಷಣ ಗ್ರಾಮವಾದ ಶೆಟ್ಫಾಲ್ ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು.

ಹೌದು, ನೂರಾರು ನಾಗರಹಾವುಗಳೊಂದಿಗೆ ಜನರು ಒಟ್ಟಿಗೆ ಜೀವಿಸುತ್ತಿರುವ ತಾಣವನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದರೆ ನೀವೊಮ್ಮೆ ಮಹಾರಾಷ್ಟ್ರದ ಆ ಗ್ರಾಮ ವಿಸಿಟ್ ಮಾಡಲೇಬೇಕು. ಆ ಗ್ರಾಮ ಎಲ್ಲಿದೆ. ಏನದರ ವಿಶೇಷತೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಶೆಟ್ಪಾಲ್.. ಮಹಾರಾಷ್ಟ್ರದ ಶೋಲಾಪುರ ಜಿಲ್ಲೆಯ ಒಂದು ಪುಟ್ಟ ಹಳ್ಳಿ. ನೀವು ಸಾಮಾನ್ಯವಾಗಿ ಭೇಟಿ ನೀಡುವ ಇತರೆ ಹಳ್ಳಿಗಿಂತ ನಿಜವಾಗಿಯು ಇದು ಭಿನ್ನವಾಗಿದೆ. ಇದು ಬಯಲು ಪ್ರದೇಶವಾಗಿರುವುದರಿಂದ ಇಲ್ಲಿ ಹಲವಾರು ಪ್ರಬೇಧದ ಹಾವುಗಳು ಕಾಣಸಿಗುತ್ತದೆ. ಈ ಗ್ರಾಮದಲ್ಲಿ ಹಾವುಗಳನ್ನು ಭಕ್ತಿಯಿಂದ ಪೂಜಿಸುವುದು ಮಾತ್ರವಲ್ಲ, ಶಾಶ್ವತವಾಗಿ ಇಲ್ಲಿ ವಾಸಿಸಲು ಸ್ಥಳೀಯರು ನೆಲೆಯನ್ನು ನೀಡಿದ್ದಾರೆ.

ಹಾವು ಕಡಿದರೆ ಜೀವಕ್ಕೇ ಅಪಾಯ. ಆದರೆ, ಇಲ್ಲಿ ಪ್ರತಿ ಮನೆಯಲ್ಲೂ ಹಾವುಗಳಿವೆ. ಹಾವುಗಳು ಇಲ್ಲಿ ಯಾರನ್ನೂ ಕಡಿದ ಬಗ್ಗೆ ದಾಖಲೆಗಳೇ ಇಲ್ಲ. ಇಲ್ಲಿನ ಸ್ಥಳೀಯ ದೇವರು, ಸಿದ್ಧೇಶ್ವರನಿಗೆ ಹಾವಿನ ಕಡಿತವನ್ನು ಗುಣಪಡಿಸುವ ಶಕ್ತಿ ಇದೆ ಎಂಬುದು ಇಲ್ಲಿ ವಾಸಿಸುತ್ತಿರುವ ಜನರ ನಂಬಿಕೆಯಾಗಿದೆ.

ಇದನ್ನೂ ಓದಿ : ದೇಹಕ್ಕೆ ತಂಪು ಕಾಮಕಸ್ತೂರಿ ಬೀಜ

ನಾಗರಹಾವಿಗೆ ವಿಶೇಷ ಕೊಠಡಿ

ಗ್ರಾಮದ ಪ್ರತಿಯೊಂದು ಮನೆಯಲ್ಲೂ ನಾಗರಹಾವುಗಳಿಗಾಗಿ ಪ್ರತ್ಯೇಕವಾದ ಪ್ರದೇಶವನ್ನು ಮೀಸಲಿಟ್ಟಿದ್ದಾರೆ. ಆ ವಿಶೇಷವಾದ ಹಾವಿನ ಸ್ಥಳವನ್ನು ‘ದೇವಸ್ಥಾನಂ’ ಎಂದು ಕರೆಯುತ್ತಾರೆ. ಹಾಗೆಯೇ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿಯೂ ನಾಗರಹಾವಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಡುತ್ತಾರೆ.

ಹಾವಿನ ಜೊತೆ ಮಕ್ಕಳ ಆಟ

ಅಚ್ಚರಿಯ ವಿಷಯವೆಂದರೆ, ಈ ಶೆಟ್ಫಾಲ್ ಗ್ರಾಮದ ನಾಗರಹಾವುಗಳು ಮಕ್ಕಳು ಸೇರಿದಂತೆ ಯಾರೊಬ್ಬರಿಗೂ ಹಾನಿಯಂಟು ಮಾಡುವುದಿಲ್ಲವಂತೆ. ಇಲ್ಲಿನ ಮಕ್ಕಳು ನಾಗರಹಾವಿನ ಜೊತೆಗೆ ಆಟವಾಡುವುದನ್ನು ನೀವು ಕಣ್ಣಾರೆ ಕಾಣಬೇಕಾದರೆ ಮಹಾರಾಷ್ಟ್ರದ ಈ ಶೆಟ್ಫಾಲ್ ಗ್ರಾಮಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.

  • ಪ್ರೀತಿ ಕುಮಾರ್, ಪವರ್ ಟಿವಿ

RELATED ARTICLES

Related Articles

TRENDING ARTICLES