Sunday, December 22, 2024

ಬೊಜ್ಜು ಕರಗಿಸಲು ಈ ಟಿಪ್ಸ್ ಮಿಸ್ ಮಾಡದೇ ಟ್ರೈ ಮಾಡಿ ಸಾಕು

ಇಸಾಬ್​ಗೋಲ್​​ ಹಸ್ಕ್​ (ISABGOL) ಅನ್ನು ಸೈಲಿಯಮ್ ಹೊಟ್ಟು ಎಂದೂ ಕರೆಯುತ್ತಾರೆ. ಇದನ್ನು ಪ್ಲಾಂಟಗೋ ಒವಾಟಾ ಅಥವಾ ಮರುಭೂಮಿಯಲ್ಲಿ ಬೆಳೆಯುವ ಗೋಧಿಯ ಬೀಜಗಳ ಹೊಟ್ಟು.

ತೂಕ ಇಳಿಸಲು ಮತ್ತು ಜೀರ್ಣಾಂಗದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುವ ಈ ಇಸಬ್​ಗೋಲ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳು ಯಾವುವು ಎಂದರೆ,

⦁ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಲು

⦁ ಮಧುಮೇಹ ನಿವಾರಣೆ ಆಗಲು

⦁ ಜೀರ್ಣಕ್ರೀಯೆ ವೃದ್ಧಿ

⦁ ಮುಖದ ಹೊಳಪು

⦁ ಕೂದಲು ದಟ್ಟವಾಗಿ ಬೆಳೆಯಲು

ಇದನ್ನೂ ಓದಿ : ಮುಖದ ಹೊಳಪು ಹೆಚ್ಚಿಸಲು ಮನೆಯಲ್ಲಿದೆ ಸಿಂಪಲ್ ಟಿಪ್ಸ್!

ಬೊಜ್ಜು ಕರಗಿ ಸಣ್ಣ ಆಗ್ಬೇಕು ಅನ್ನೋರು ಪ್ರತಿದಿನ ಇದನ್ನು ಮಿಸ್ ಮಾಡದೇ ಟ್ರೈ ಮಾಡಿ. ಒಂದು ಲೋಟ ಬೆಚ್ಚಗೆ ಇರುವ ನೀರಿಗೆ ಅಥವಾ ಹಾಲಿಗೆ ಒಂದು ಚಮಚ ಇಸಾಬ್​ಗೋಲ್​​ ಹಸ್ಕ್​ ಅನ್ನು ಮಿಕ್ಸ್ ಮಾಡಿ 10 ನಿಮಿಷ ಬಿಟ್ಟು ಅಥವಾ ಮಿಕ್ಸ್ ಮಾಡಿದ ಕೂಡಲೇ ಕುಡಿಯಬೇಕು.

ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಬೇಗನೆ ಸಣ್ಣ ಆಗಲು ಒಂದು ಚಮಚ ನಿಂಬೆ ರಸವನ್ನು ಬೆರೆಸಬಹುದು. ಅದಾದ ನಂತರ 2 ಲೋಟ ನೀರನ್ನು ಕುಡಿಯಬೇಕು. ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯೋದ್ರಿಂದ ಒಳ್ಳೆಯ ಫಲಿತಾಂಶವನ್ನು ನೀವು ಕಾಣಬಹುದು. ಇದನ್ನು ಶರಬತ್ತು ರೀತಿ ಮಾಡಿಕೊಂಡು ಕುಡಿಯಬಹುದು.

ವಿಶೇಷ ಸೂಚನೆ : ಗರ್ಭೀಣಿಯರು ಸೇವಿಸುವಂತಿಲ್ಲ. ಇಸಾಬ್​ಗೋಲ್​ ಹಸ್ಕ್ ಹತ್ತಿರದ ಎಲ್ಲಾ ಮೆಡಿಕಲ್ ಗಳಲ್ಲು ಲಭ್ಯ.

ಪ್ರೀತಿ ಕುಮಾರ್, ಪವರ್​ ಟಿವಿ

RELATED ARTICLES

Related Articles

TRENDING ARTICLES