Monday, December 23, 2024

ನನ್ನ ಗನ್ ಮ್ಯಾನ್, ಪಿಎಗೆ 50-100 ದುಡ್ ಹೊಡೆದ್ರೆ ನಿಮ್ಮನ್ನ ಮುಂದಕ್ಕೆ ಕರ್ಕೊತ್ತಾರೆ : ಡಿ.ಕೆ ಶಿವಕುಮಾರ್

ಬೆಂಗಳೂರು : ನನ್ನ ಗನ್ ಮ್ಯಾನ್, ಪಿಎಗೆ 50, 100 ರೂಪಾಯಿ ದುಡ್ ಹೊಡೆದ್ರೆ ನಿಮ್ಮನ್ನ ಮುಂದಕ್ಕೆ ಕರ್ಕೊತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರಾಮನಗರ ಜಿಲ್ಲೆ ಕನಕಪುರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರೂ ಬೆಂಗಳೂರಿಗೆ ಬಂದು ಕಾಯುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ನನ್ನನ್ನು ಭೇಟಿ ಮಾಡಲು ಸಾಕಷ್ಟು ಜನ ಬರ್ತಿದ್ದೀರಿ. ಮುಂದೆ ರಾಮನಗರ ಹಾಗೂ ಕನಕಪುರದಲ್ಲಿ ಕಚೇರಿ ತೆಗೆಯುತ್ತೇನೆ. ವಾರದಲ್ಲಿ ಒಂದು ದಿನ ಜಿಲ್ಲೆಗೆ ಮೀಸಲಿಡುವ ಕೆಲಸ ಮಾಡುತ್ತೇನೆ. ಬೆಂಗಳೂರಿಗೆ ಬಂದ್ರೆ ನನ್ನ ಗನ್ ಮ್ಯಾನ್, ಪಿಎಗಳಿಗೆ 50, 100 ರೂ. ದುಡ್ ಕೊಟ್ರೆ ನಿಮ್ಮನ್ನ ಮುಂದುಕ್ಕೆ ಕರ್ಕೊತ್ತಾರೆ. ಇಲ್ಲಾಂದ್ರೆ ನಿಮ್ಮನ್ನ ಹಿಂದೆ ಬಿಡ್ತಾರೆ. ಎಲ್ಲವೂ ನನಗೆ ಗೊತ್ತು ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಆಗಬೇಕು

ಕನಕಪುರ ವಿಧಾನಸಭಾ ಕ್ಷೇತ್ರ ಮಾದರಿ ಕ್ಷೇತ್ರ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈಗಾಗಲೇ ಪತ್ರ ಕೊಟ್ಟಿದ್ದೇನೆ. ನನ್ನ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಆಗಬೇಕು. ಬಿಜೆಪಿ ಸರ್ಕಾರ ಮೆಡಿಕಲ್ ಕಾಲೇಜು ತಪ್ಪಿಸಿತ್ತು. ಅದನ್ನು ಮತ್ತೆ ತರಲು ನಾನು ಮುಂದಾಗಿದ್ದೇನೆ. ಈಗಾಗಲೇ ಸಿಎಂ ಜೊತೆ ಮಾತನಾಡಿದ್ದೇನೆ‌ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಶೆಟ್ಟರ್, ಸವದಿ, ಗುಬ್ಬಿ ಶ್ರೀನಿವಾಸರಿಂದ ನಮಗೆ ಶಕ್ತಿ ಬಂದಿದೆ : ಡಿ.ಕೆ ಶಿವಕುಮಾರ್

ಶೀಘ್ರ ಬೆಂಗಳೂರುಕನಕಪುರ ರಸ್ತೆ ಪೂರ್ಣ

ಆರೋಗ್ಯ, ಶಿಕ್ಷಣ ಬಹಳ ಮುಖ್ಯ. ಎಲ್ಲದಕ್ಕೂ ನಾವು ಬೆಂಗಳೂರಿಗೆ ಹೋಗಲು ಆಗಲ್ಲ. ಎಲ್ಲರೂ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು. ಬೆಂಗಳೂರು-ಕನಕಪುರ ರಸ್ತೆ ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ. ಕ್ಷೇತ್ರದಲ್ಲಿ ಎಲ್ಲಾ ರೀತಿಯ ಬದಲಾವಣೆ ಆಗುತ್ತೆ ಎಂದು ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

ಯಾರೂ ಆಸ್ತಿಗಳನ್ನು ಮಾರಿಕೊಳ್ಳಬೇಡಿ

ನೀವು ಯಾರೂ ನಿಮ್ಮ ಆಸ್ತಿಗಳನ್ನು ಮಾರಿಕೊಳ್ಳಬೇಡಿ. ಮುಂದೆ ಕ್ಷೇತ್ರದ ಜನರಿಗೆ ಉತ್ತಮ ಭವಿಷ್ಯ ಇದೆ. ಮುಂದೆ ನಿಮ್ಮ ಆಸ್ತಿಗೆ ಒಳ್ಳೆಯ ಬೆಲೆ ಬರುತ್ತದೆ. ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆಗೆ ಹೆಚ್ಚು ಒತ್ತು ಸಿಗಲಿದೆ. ಕ್ಷೇತ್ರದ ಜನತೆಗೆ ಮುಂದೆ ಆರ್ಥಿಕ ಶಕ್ತಿ ಸಿಗಲಿದೆ ಎಂದು ಡಿಕೆಶಿ ಸಲಹೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES